ರಾಯಚೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಧೀರ್ಘ ಹೋರಾಟದ ಮೂಲಕ ದೇಶದಲ್ಲಿರುವ ಅಸ್ಪೃಶ್ಯ ಜಾತಿಗಳನ್ನು ಒಂದುಗೂಡಿಸಿದರು. ಆದರೆ, ಮತಬ್ಯಾಂಕ್ ರಾಜಕೀಯಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಅಸ್ಪೃಶ್ಯ ಜಾತಿಗಳನ್ನು ವಿಭಜಿಸುತ್ತಿವೆ ಎಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಆರೋಪಿಸಿದರು.

ರಾಜಕೀಯ ಪಕ್ಷಗಳು ಉದ್ದೇಶ ಪೂರ್ವಕವಾಗಿಯೇ ಅಸ್ಪೃಶ್ಯ ಸಮುದಾಯಗಳನ್ನು ಬಲಗೈ ಹಾಗೂ ಎಡಗೈ ಎಂದು ಭಾಗಮಾಡಿವೆ. ವಾಸ್ತವದಲ್ಲಿ ಎಡಗೈ ಹಾಗೂ ಬಲಗೈ ಎನ್ನುವುದೇ ಇಲ್ಲ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ನಿಜವಾದ ಅಸ್ಪೃಶ್ಯರಿಗೆ ವಿಶೇಷವಾಗಿ ಮಾದಿಗರಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಲಾಭ ದೊರಕಬೇಕಾದರೆ ಲಂಬಾಣಿ, ವಡ್ಡರ್, ಕೊರಚ ಹಾಗೂ ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.

ಹಳೆಯ ಮೀಸಲಾತಿ ಪದ್ಧತಿ ಮುಂದುವರಿಯಬೇಕು. ಅದರಲ್ಲೇ ಅಸ್ಪೃಶ್ಯ ಜಾತಿಗಳಿಗೆ ಒಳ ಮೀಸಲಾತಿ ಒದಗಿಸಬೇಕು. ಅಸ್ಪೃಶ್ಯರಲ್ಲದ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಲ್ಲಿ ಸೇರಿಸಿರುವ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಮಾದಿಗ ದಂಡೋಡ ಸಮುದಾಯದ ಮುಖಂಡರು ವಾಸ್ತವ ಅಂಶಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಮಾದಿಗ ಸಮುದಾಯದವರು ವರ್ಗೀಕರಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಿದಕ್ಕಾಗಿ ಮಾರ್ಚ್ 27ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಂಪುಟ ಸಭೆ ಕರೆಯಲಾಗಿದೆ. ಅಡ್ವೋಕೇಟ್ ಜನರಲ್ ಹೈಕೋರ್ಟ್ಗೆ ಸಲ್ಲಿಸಿರುವ ಮೊಮೊ ಹಿಂಪಡೆಯದೇ ಸಂಚಿವ ಸಂಪುಟದಲ್ಲಿ ಚರ್ಚಿಸಿದರೆ ಯಾವ ಲಾಭವೂ ಆಗದು ಎಂದು ಅಭಿಪ್ರಾಯಪಟ್ಟರು.

ಒಳ ಮೀಸಲಾತಿ ಜಾರಿಯಾದರೆ ಮಾದಿಗರಿಗೆ ಶೇ 6ರಷ್ಟು ಮೀಸಲಾತಿ ದೊರೆಯಲಿದೆ. ಮಾದಿಗ ಸಮುದಾಯದವರು ಚೆನ್ನಾಗಿ ಅಧ್ಯಯನ ಮಾಡಿ ಪರೀಕ್ಷೆ ಬರೆದರೆ ಶೇಕಡ 15ರಷ್ಟು ಮೀಸಲಾತಿ ಸೌಲಭ್ಯ ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.

ಮಾದಿಗ ಸಮುದಾಯದವರು ಉದ್ಧಾರವಾಗಬೇಕಾದರೆ ಆರ್ಎಸ್ಎಸ್ ಸಂಘಟನೆಯ ವಾದಿರಾಜ್ ಅವರಿಂದ ದೂರವಿರಬೇಕು. ವಾದಿರಾಜ್ ಸಾಮರಸ್ಯ ಅವರು ಲಂಬಾಣಿ, ವಡ್ಡರ್, ಕೊರಚ, ಕೊರಮ ಜಾತಿಗಳ ರಕ್ಷಣೆ ಮಾಡಿ ಮಾದಿಗ ಹೊಲೆಯ ಸಮಾಜದಲ್ಲಿ ವಿಷಯ ಬೀಜ ಬಿತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.