ಭಾನುವಾರ, ಮಾರ್ಚ್ 29, 2020
19 °C

ಕೋವಿಡ್-19 ಭೀತಿ: ಮಂತ್ರಾಲಯ ಮಠದ ಮಹಾದ್ವಾರ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಕೊರೊನಾ ವೈರಸ್‌ ಮಹಾಮಾರಿ ವಿಸ್ತರಣೆ ಆಗುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಕ್ಕಾಗಿ ಮಂತ್ರಾಲಯದ ರಾಯರ ಮಠದ ಮಹಾದ್ವಾರವನ್ನು ಶುಕ್ರವಾರದಿಂದ ಬಂದ್‌ ಮಾಡಲಾಗಿದೆ ಎಂದು ಮಠದ ಆಡಳಿತ ವ್ಯವಸ್ಥಾಪಕ ಶ್ರೀನಿವಾಸರಾವ್‌ ತಿಳಿಸಿದ್ದಾರೆ.‌

ಯಾವುದೇ ಪ್ರಸಾದ ವಿತರಣಾ ವ್ಯವಸ್ಥೆಯೂ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಮಂತ್ರಾಲಯದಲ್ಲಿ ರಾಯರ ದರ್ಶನ ಸ್ಥಗಿತ ಮಾಡಲಾಗಿದ್ದು, ಭಕ್ತರು ಬರುವುದನ್ನು ನಿಲ್ಲಿಸಬೇಕು. ತಾವಿರುವ ಸ್ಥಳದಲ್ಲೇ ರಾಯರ ಸ್ಮರಣೆ ಮಾಡುವಂತೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಈ ಮೊದಲು ಸೂಚನೆ ನೀಡಿದ್ದರು. ಹಾಗಿದ್ದರೂ ಮಂತ್ರಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರಲಿಲ್ಲ.

ಪಂಚಮುಖಿಯಲ್ಲಿ ದರ್ಶನ ಸ್ಥಗಿತ: ತಾಲ್ಲೂಕಿನ ಗಾಣಧಾಳದಲ್ಲಿರುವ ಪಂಚಮುಖಿ ಆಂಜಿನೇಯಸ್ವಾಮಿ ಮತ್ತು ಎರಕಲಮ್ಮ ದೇವಸ್ಥಾನಗಳಲ್ಲಿ ದರ್ಶನವನ್ನು ಶುಕ್ರವಾರದಿಂದ ಜಿಲ್ಲಾಡಳಿತದ ಸೂಚನೆಯಂತೆ ಸ್ಥಗಿತ ಮಾಡಲಾಗಿದೆ ಎಂದು ಪಂಚಮುಖಿ ಸೇವಾ ಸಮಿತಿ ತಿಳಿಸಿದೆ.

ಸೇವೆ, ಉತ್ಸವ ಹಾಗೂ ಯಾವುದೇ ಸಮಾರಂಭಗಳು ಇರುವುದಿಲ್ಲ ಎಂದು ಸಮಿತಿ ಅಧ್ಯಕ್ಷ ಶಾಮಾಚಾರ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು