ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಕಲದೊಡ್ಡಿ: ನೀರು ಶುದ್ಧೀಕರಣ ಘಟಕ ಆರಂಭ

Last Updated 8 ಏಪ್ರಿಲ್ 2022, 12:23 IST
ಅಕ್ಷರ ಗಾತ್ರ

ಜಾಲಹಳ್ಳಿ: ಸಮೀಪದ ಸೋಮನಮರಡಿ ಗ್ರಾ.ಪಂ ವ್ಯಾಪ್ತಿಯ ಮ್ಯಾಕಲದೊಡ್ಡಿ ಗ್ರಾಮದಲ್ಲಿ ಹಾಳಾಗಿದ್ದು ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿ, ಇದೀಗ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಲಾಗಿದೆ.

ನೀರಿನ ಘಟಕವು ನಿರ್ವಹಣೆ ಇಲ್ಲದೇ ಮೂರು ವರ್ಷಗಳಿಂದ ಹಾಳಾಗಿತ್ತು. ಜನರು ಕುಡಿಯುವ ನೀರಿಗಾಗಿ ನಿತ್ಯ ಅಲೆದಾಡುತ್ತಿದ್ದರು. ಈ ಬಗ್ಗೆ ’ಪ್ರಜಾವಾಣಿ’ ಪತ್ರಿಕೆಯಲ್ಲಿ ಗುರುವಾರ ’ನಿರ್ವಹಣೆ ಇಲ್ಲದ ನೀರಿನ ಘಟಕ’ ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.

ಈ ಹಿಂದೆ ಘಟಕ ನಿರ್ಮಿಸಲು ಗುತ್ತಿಗೆ ಪಡೆದ ನ್ಯಾಚುರಲ್ ಇಕೋ ವಾಟರ್‌ ಸಿಸ್ಟಮ್ ಸಂಸ್ಥೆ ಅವರಿಗೆ ತಾಲ್ಲೂಕು ಸಹಾಯಕ ಎಂಜನಿಯರ್‌ ವೆಂಕಟೇಶ ಗಲಗ ಅವರು ಮಾತನಾಡಿ, ಘಟಕವನ್ನು ತಕ್ಷಣವೇ ದುರಸ್ತಿಗೊಳಿಸಿ ಜನತೆ ನೀರು ಒದಗಿಸಬೇಕು. ಇಲ್ಲವಾದರೆ, ನಿಮ್ಮ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ನಂತರ ಸಂಸ್ಥೆಯವರು ಜನತೆಗೆ ಘಟಕ ದುರಸ್ತಿ ಮಾಡಿ ಜನರಿಗೆ ನೀರು ಸಿಗುವಂತೆ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋರೈಡ್, ಆರ್ಸೆನಿಕ್ ಅಂಶ ಇರುವುದರಿಂದಾಗಿ ಸರ್ಕಾರವು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ತಲಾ ₹ 15 ಲಕ್ಷ ವೆಚ್ಚದಲ್ಲಿ ಹಲವು ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದೆ.

ಆದರೆ, ಜಾಲಹಳ್ಳಿ, ಬುಂಕಲದೊಡ್ಡಿ, ಚಿಂಚೋಡಿ, ವೀರಗೋಟ್, ಬೋಮ್ಮನಹಳ್ಳಿ, ಪರಪುರ, ಮುಕ್ಕನಾಳ, ಗಾಜಲದಿನ್ನಿ ಊಟಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಸ್ಥಾಪಿಸಿರುವ ಘಟಕಗಳು ದುರಸ್ತಿಯಲ್ಲಿ ಇರುವುದರಿಂದ ಜನತೆಗೆ ಶುದ್ಧ ಕುಡಿಯುವ ನೀರಿಗಾಗಿ ಜನತೆ ಅಲೆಯುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT