ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ಸಾರಿಗೆ–ಖಾಸಗಿ ಬಸ್ ಅಪಘಾತ; ವ್ಯಕ್ತಿ ಸಾವು

Published : 8 ಸೆಪ್ಟೆಂಬರ್ 2024, 16:07 IST
Last Updated : 8 ಸೆಪ್ಟೆಂಬರ್ 2024, 16:07 IST
ಫಾಲೋ ಮಾಡಿ
Comments

ಸಿಂಧನೂರು: ತಾಲ್ಲೂಕಿನ ಹಾರಾಪುರ ಗ್ರಾಮದ ಹೆದ್ದಾರಿಯಲ್ಲಿ ಭಾನುವಾರ ನಸುಕಿಜಾವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ಘಕಟದ  ಬೆಂಗಳೂರು-ಯಾದಗಿರಿ ಬಸ್ ಹಾಗೂ ಸುಗಮ ಟ್ರಾವೆಲ್ಸ್ ಬಸ್ ನಡುವೆ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟು, 10 ಜನರಿಗೆ ಗಾಯಗಳಾಗಿವೆ.

ಮೃತ ವ್ಯಕ್ತಿಯನ್ನು ಬಸವಕಲ್ಯಾಣ ತಾಲ್ಲೂಕಿನ ಪುಂಡಲೀಕಪ್ಪ (38) ಎಂದು ಗುರುತಿಸಲಾಗಿದೆ. ಗಾಯಾಳುಗಳು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ಸಾರಿಗೆ ಬಸ್ ಪ್ರಯಾಣಿಕರೊಬ್ಬರನ್ನು ಇಳಿಸಲು ಹಾರಾಪುರದಲ್ಲಿ ನಿಂತಿದೆ. ಇದೇ ಸಮಯದಲ್ಲಿ ಕಲಬುರಗಿ ಕಡೆ ಹೊರಟಿದ್ದ ಖಾಸಗಿ ಬಸ್ ಸಾರಿಗೆ ಬಸ್‍ಗೆ ಹಿಂಬದಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಸಾರಿಗೆ ಬಸ್ ರಸ್ತೆ ಬದಿ ಉರುಳಿದ್ದು ಹಿಂಬದಿ ಜಖಂಗೊಂಡಿದೆ. ಸುಗಮ ಟ್ರಾವೆಲ್ಸ್ ಬಸ್ ಮುಂಬದಿ ನಜ್ಜುಗುಜ್ಜಾಗಿದೆ.

ವಿಷಯ ತಿಳಿಯುತ್ತಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವುಕುಮಾರ, ಡಿವೈಎಸ್‍ಪಿ ಬಿ.ಎಸ್.ತಳವಾರ, ಸಿಪಿಐ ವೀರಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು.
ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT