ರಾಯಚೂರು: ಮಂತ್ರಾಲಯದ ಸುಯತೀಂದ್ರ ತೀರ್ಥ ಕಾಲೊನಿಯಲ್ಲಿನ ಕಾರ್ಮಿಕರ ತಗಡಿನ ಶೆಡ್ನಲ್ಲಿ ಬುಧವಾರ ಮಧ್ಯಾಹ್ನ ಶಾರ್ಟ್ ಸರ್ಕಿಟ್ನಿಂದ ಮೂರು ಸಿಲಿಂಡರ್ ಸ್ಫೋಟಗೊಂಡಿವೆ.

ಸ್ಫೋಟದಿಂದಾಗಿ ಬೆಂಕಿ ಹೊತ್ತಿಕೊಂಡು ಶೆಡ್ನಲ್ಲಿದ್ದ ಕಾರ್ಮಿಕರ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಕಾರ್ಮಿಕರೆಲ್ಲರೂ ಕೆಲಸಕ್ಕೆ ಹೋಗಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

ಕಾಲೊನಿಯಲ್ಲಿರುವ 12 ತಗಡಿನ ಶೆಡ್ಗಳ ಪೈಕಿ ಮೊದಲು ಒಂದು ಶೆಡ್ನಲ್ಲಿ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ನಂತರ ಇತರ ಶೆಡ್ಗಳಿಗೂ ವ್ಯಾಪಿಸಿ, 5 ಕೆಜಿಯ ಮೂರು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಶೆಡ್ನಲ್ಲಿದ್ದ 14 ಕೆಜಿಯ ಒಂದು ಸಿಲಿಂಡರ್ ಹೊರತೆಗೆದು ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ.

ಸ್ಥಳಕ್ಕೆ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲಿಸಿದರು. ಐದು ಶೆಡ್ಗಳಲ್ಲಿ ವಾಸವಾಗಿರುವ ಬಿಹಾರ ಮೂಲದ ಎಲ್ಲ 20 ಕಾರ್ಮಿಕರಿಗೆ ರೇಷನ್, ಅಗತ್ಯ ವಸ್ತುಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.