ಮಾನ್ವಿ: ಪಟ್ಟಣದ ಕೆರೆ ಭರ್ತಿಯಾಗಿದ್ದರೂ ಪದೇ ಪದೇ ಒಡೆಯುವ ಪೈಪ್ಗಳು, ಆಮೆಗತಿಯಲ್ಲಿ ಸಾಗಿರುವ ಅಮೃತ-2 ಯೋಜನೆಯ ಹೊಸ ಪೈಪ್ಲೈನ್ ಕಾಮಗಾರಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಅಡ್ಡಿಯಾಗಿವೆ.

ಪಟ್ಟಣದಲ್ಲಿ ಒಟ್ಟು 27 ವಾರ್ಡ್ಗಳಿವೆ. ಕಳೆದ ವಾರ ಕುಡಿಯುವ ನೀರಿನ ಸಮಸ್ಯೆ ವಿರೋಧಿಸಿ 2, 3, 18, 25 ಹಾಗೂ 26ನೇ ವಾರ್ಡ್ ನಿವಾಸಿಗಳು ನಮಾಜಗೇರಿ ಗುಡ್ಡದ ಕುಡಿಯುವ ನೀರಿನ ಟ್ಯಾಂಕ್ ಹತ್ತಿರ ಪ್ರತಿಭಟನೆ ನಡೆಸಿದ ಘಟನೆ ನಡೆದಿತ್ತು.

ಪಟ್ಟಣದ ಹೊರವಲಯದ ರಬ್ಬಣಕಲ್ ಪಂಪ್ಹೌಸ್ನಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್ಗಳು ಒಡೆಯುವುದು, ವಾಲ್ವ್ ಬಂದ್ ಆಗುವುದು, ಮೋಟಾರು ಸುಟ್ಟು ಹೋಗುವುದು ಹಲವು ವರ್ಷಗಳಿಂದಲೂ ಸಾಮಾನ್ಯವಾಗಿದ್ದರೂ ಪುರಸಭೆ ಅಧಿಕಾರಿಗಳು ಹಳೆಯ ಪೈಪ್ಗಳನ್ನು ಬದಲಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಸ್ಥಳೀಯರ ದೂರು.

ಒಡೆದ ಪೈಪ್ ದುರಸ್ತಿಗೆ ಕನಿಷ್ಠ ನಾಲ್ಕು ದಿನ ಬೇಕಾಗುತ್ತದೆ. ಪ್ರಸ್ತುತ ಪಟ್ಟಣಕ್ಕೆ ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ಪೈಪ್ ಒಡೆದಾಗ ದುರಸ್ತಿ ಕಾರ್ಯ ಮುಗಿದು ಐದಾರು ದಿನಗಳ ನಂತರ ನೀರು ಹರಿಸಲಾಗುತ್ತದೆ ಎಂಬುದು ಕೆಲವು ವಾರ್ಡ್ ನಿವಾಸಿಗಳ ಆರೋಪ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ವಿವಿಧೆಡೆ ಪೈಪ್ಗಳು ಒಡೆದು ಪಟ್ಟಣದ ಜನ ಸಮಸ್ಯೆ ಎದುರಿಸಿದ್ದಾರೆ. ನೀರು ಪೂರೈಕೆಯಲ್ಲಿನ ವ್ಯತ್ಯಯ ನಿರಂತರವಾಗಿರುವ ಕಾರಣ ಕೆಲವು ವಾರ್ಡ್ ಗಳಲ್ಲಿ ಸ್ಥಳೀಯರು ಖಾಸಗಿ ಟ್ಯಾಂಕರ್ಗಳನ್ನು ಅವಲಂಬಿಸುವಂತಾಗಿದೆ.

ಪಟ್ಟಣ ವ್ಯಾಪ್ತಿಯ ಜುಮ್ಮಲದೊಡ್ಡಿಯಲ್ಲಿ ಹೊಸ ಟ್ಯಾಂಕ್ ನಿರ್ಮಾಣ ಮಾಡಿ ಎಂಟು ವರ್ಷಗಳಾಗಿವೆ. ಈ ಟ್ಯಾಂಕ್ಗೆ ನೀರು ಸರಬರಾಜು ಮಾಡಿ ವಿವಿಧ ವಾರ್ಡ್ಗಳಿಗೆ ನೀರು ಪೂರೈಸುವ ವ್ಯವಸ್ಥೆಯೂ ಆಗಿಲ್ಲ.

ಪಟ್ಟಣದ 27ನೇ ವಾರ್ಡ್ನಲ್ಲಿ ಅಮೃತ-2 ಯೋಜನೆ ಅಡಿಯಲ್ಲಿ ರಸ್ತೆ ಬದಿಯಲ್ಲಿ ಕೈಗೊಂಡಿದ್ದ ಹೊಸ ಪೈಪ್ಲೈನ್ ಕಾಮಗಾರಿ ಹದಿನೈದು ದಿನಗಳಿಂದ ಸ್ಥಗಿತಗೊಂಡಿದೆ. ಇದರಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗಿದೆ ಎಂದು ವ್ಯಾಪಾರಿ ಇರ್ಫಾನ್ ಭಾನುವಾರ ತಿಳಿಸಿದರು.

‘ಪಟ್ಟಣದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರುವ ಕಾರಣ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಕೆಲವು ವಾರ್ಡ್ಗಳಿಗೆ ಕುಡಿಯುವ ನೀರು ಪೂರೈಕೆಗೆ ಅಡ್ಡಿಯಾಗುತ್ತಿದೆ’ ಎಂದು ಪುರಸಭೆ ಸಿಬ್ಬಂದಿ ಹೇಳುತ್ತಾರೆ.

ಪುರಸಭೆಯಲ್ಲಿ ಆಡಳಿತ ಮಂಡಳಿಯ ಅವಧಿ ಮುಗಿದಿರುವ ಕಾರಣ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಅವರು ಅಮೃತ-2 ಯೋಜನೆಯ ಪೈಪ್ಲೈನ್ ಕಾಮಗಾರಿ ಚುರುಕುಗೊಳಿಸಲು ಕ್ರಮ ಕೈಗೊಳ್ಳಬೇಕು. ಕೆಲವು ವಾರ್ಡ್ಗಳಲ್ಲಿ ಬತ್ತಿ ಹೋಗಿರುವ ಹಳೆಯ ಕೊಳವೆ ಬಾವಿಗಳ ಪುನಶ್ಚೇತನ ಕಾಮಗಾರಿ ಕೈಗೊಳ್ಳಬೇಕು.

ಎಲ್ಲ ವಾರ್ಡ್ಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎಂ.ಬಾಷಾ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-32-771466753

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.