ಮಾನ್ವಿ: ತಾಲ್ಲೂಕಿನ ಬೈಲ್ ಮರ್ಚೇಡ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಮುದಾಯ ಭವನದ ನಾಮಫಲಕ ಕುಸಿದು ಬಿದ್ದು ಇಬ್ಬರು ಮಕ್ಕಳು ದುರ್ಮರಣಕ್ಕೀಡಾಗಿದ್ದಾರೆ.

ಮೃತ ಇಬ್ಬರು ಮಕ್ಕಳನ್ನು ವಿಶ್ವನಾಥ ರಾಮಲಿಂಗ (9) ಮತ್ತು ಸನ್ವಿತಾ ಪೆದ್ದಯ್ಯ (2 ) ಎಂದು ಗುರುತಿಸಲಾಗಿದೆ.

ರಾತ್ರಿ ಸಮುದಾಯ ಭವನದ ಮುಂಭಾಗದಲ್ಲಿ ಮಹಿಳೆಯರು ಮಕ್ಕಳೊಂದಿಗೆ ಬಯಲಾಟ ವೀಕ್ಷಣೆಗೆ ಕುಳಿತ ಸಂದರ್ಭದಲ್ಲಿ ದಿಢೀರನೆ ಈ ಘಟನೆ ಸಂಭವಿಸಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಬಸ್ಸಮ್ಮ ಹನುಮಂತ್ರಾಯ (40), ಲಕ್ಷ್ಮೀ ಹನುಮಂತ್ರಾಯ (18),ಮತ್ತು ಬಾಲಕಿ ಯಲ್ಲಮ್ಮ ಸಣ್ಣ ವಿರೇಶ (3) ಅವರನ್ನು ಚಿಕಿತ್ಸೆಗಾಗಿ ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.