ಬುಧವಾರ, ಮೇ 18, 2022
28 °C
ಮಸ್ಕಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹೇಳಿಕೆ

ಮಸ್ಕಿ ಪುರಸಭೆ: ₹ 2.35 ಲಕ್ಷ ಉಳಿತಾಯ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ಪುರಸಭೆಯಲ್ಲಿ ಶುಕ್ರವಾರ 2022 ಹಾಗೂ 23ನೇ ಸಾಲಿನ ₹ 2.35 ಲಕ್ಷ ಉಳಿತಾಯ ಬಜೆಟ್ ಮಂಡಿಸುವ ಮೂಲಕ ಜನಪರವಾದ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ತಿಳಿಸಿದರು.

ಬಜೆಟ್ ಮಂಡನೆ ನಂತರ ಪುರಸಭೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘₹ 6.30 ಕೋಟಿ ಸ್ವೀಕೃತಿ, ₹ 5.68 ಕೋಟಿ ಬಂಡವಾಳ ಸ್ವೀಕೃತಿ ಹಾಗೂ ₹ 8.91 ಕೋಟಿ ಅಸಾಧಾರಣ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ₹ 4.27 ಕೋಟಿ ರಾಜಸ್ವ ಪಾವತಿ,₹ 7.46 ಕೋಟಿ ಬಂಡವಾಳ ಪಾವತಿ ಹಾಗೂ ₹ 8.86 ಕೋಟಿ ಸ್ವೀಕೃತಿ ಪಾವತಿಸಲಾಗುವುದು’ ಎಂದು ಅವರು ತಿಳಿಸಿದರು.

2005-06 ಸಾಲಿನ ಸರ್ಕಾರದ ಆಸ್ತಿ ತೆರಿಗೆ ಮಾರ್ಗಸೂಚಿ ಪ್ರಕಾರ ತೆರಿಗೆ ಹಾಕಲಾಗಿದೆ ಹೊರತು ಸಾರ್ವಜನಿಕರಿಗೆ ಯಾವುದೇ ಹೆಚ್ಚಿನ ತೆರಿಗೆ ಬಾರ ಹಾಕಿಲ್ಲ ಎಂದರು.

ಪಟ್ಟಣದಲ್ಲಿ ಕುಡಿಯುವ ನೀರು, ಚರಂಡಿ ಹಾಗೂ ಸ್ವಚ್ಚತೆಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಮುಖ ವೃತ್ತದಲ್ಲಿರುವ ರಾಷ್ಟ್ರ ಪುರುಷರ ಪ್ರತಿಮೆಗಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಸಾಧನಗಳ ಅಳವಡಿಕೆಗಾಗಿ ಹಣ ಮೀಸಲಿಡಲಾಗಿದೆ ಎಂದರು.

ಪಟ್ಟಣದಲ್ಲಿನ ಸಾರ್ವಜನಿಕ ಸ್ಥಳಗಳ ರಕ್ಷಣೆಯ ಜೊತೆಗೆ ಉದ್ಯಾನಗಳ ಅಭಿವೃದ್ಧಿಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು.

ಪತ್ರಕರ್ತರ ಮತ್ತು ಅವರ ಕುಟುಂಬದ ಸದಸ್ಯರ ವೈದ್ಯಕೀಯ ಚಿಕಿತ್ಸೆಗಾಗಿ ಪ್ರಸಕ್ತ ಬಜೆಟ್‌ನಲ್ಲಿ ₹ 10 ಲಕ್ಷ ಮೀಸಲಿಡಲಾಗಿದೆ ಎಂದು ತಿಳಿಸಿದರು.

*

ಪಟ್ಟಣದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಪ್ರತಿ ವಾರ್ಡ್‌ಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು
-ಹನುಮಂತಮ್ಮ ನಾಯಕ, ಮುಖ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು