ಮಸ್ಕಿ: ‘ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು’ ಎಂದು ಕೃಷಿ ಮಾರುಕಟ್ಟೆ ಖಾತೆ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು.

ಶನಿವಾರ ಮಾರುಕಟ್ಟೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ನಂತರ ನಡೆದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮಸ್ಕಿ ಮಾರುಕಟ್ಟೆ ಮೊದಲು ಲಿಂಗಸುಗೂರು ಮಾರುಕಟ್ಟೆಗೆ ಒಳಪಟ್ಟಿತ್ತು. ಆಗ ಮಾರುಕಟ್ಟೆಗೆ ಮಂಜೂರಾಗುತ್ತಿದ್ದ ಅನುದಾನದ ಬಹುಪಾಲು ಲಿಂಗಸುಗೂರು ಅಭಿವೃದ್ಧಿಗೆ ಹೋಗುತ್ತಿತ್ತು’ ಎಂದು ಹೇಳಿದರು.

ಪ್ರಸ್ತುತ ಸರ್ಕಾರ ಮಸ್ಕಿ ಮಾರುಕಟ್ಟೆಯನ್ನು ಸ್ವತಂತ್ರ ಎಪಿಎಂಸಿಯಾಗಿ ರೂಪಿಸಿದ್ದು, ಈ ಮೂಲಕ ಸ್ಥಳೀಯ ರೈತರು ಹಾಗೂ ವರ್ತಕರಿಗೆ ಹೆಚ್ಚಿನ ಸೌಲಭ್ಯ ಒದಗಲಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಮೂಲಸೌಕರ್ಯ ವೃದ್ಧಿಗೆ, ಹೊಸ ಆಡಳಿತ ಮಂಡಳಿ ಕಚೇರಿ ನಿರ್ಮಾಣಕ್ಕೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡಲು ವಿಶೇಷ ಅನುದಾನ ಮೀಸಲಿಡಲಾಗುತ್ತದೆ’ ಎಂದು ತಿಳಿಸಿದರು.

‘ಮಾರುಕಟ್ಟೆಯಲ್ಲಿ ಎಲ್ಲ ವರ್ತಕರು ವಹಿವಾಟು ನಡೆಸುವಂತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇದರಿಂದ ಮಾರುಕಟ್ಟೆಯ ಆದಾಯ ಹೆಚ್ಚಳವಾಗುವ ಜೊತೆಗೆ ರೈತರಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆಯಿದೆ’ ಎಂದು ಹೇಳಿದರು.

ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ, ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಉಪಾಧ್ಯಕ್ಷ ನಿಂಗಯ್ಯ, ಆಡಳಿತ ಮಂಡಳಿ ಸದಸ್ಯರಾದ ಪೂರ್ಣಿಮಾ ವೀರೇಶ ಪಾಟೀಲ, ಕುಸುಮಾ ಬಲವಂತರಾಯ ವಟಗಲ್, ಪಂಪಣ್ಣ ಮಟ್ಟೂರು, ಅಮರೇಗೌಡ ಹಾಲಾಪುರ, ಮೌಲಪ್ಪ ಹಂಪನಾಳ, ಮಾನಪ್ಪ ಅಡವಿಭಾವಿ ತಾಂಡಾ, ಹಿರೇಮೌಲಸಾಬ ಪರಾಪುರ, ದುರಗಪ್ಪ ಹಡಗಲಿ, ಮಲ್ಲರೆಡ್ಡಪ್ಪ ಜಕ್ಕರಮಡಗು, ಅಮರೇಶ ಗೋನ್ವಾರ, ಹುಲಿಗೆಮ್ಮ ಗೊಲ್ಲರಹಟ್ಟಿ ಹಾಗೂ ಸಂಗಣ್ಣ ಯಲಿಗಾರ ದುರಗಪ್ಪ ಕಟ್ಟಿಮನಿ, ಮಾನಪ್ಪ ಅಡವಿಭಾವಿ ಸೇರಿದಂತೆ ಮಾರುಕಟ್ಟೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಜರಿ ದ್ದರು. ವೀರೇಶ ಪಾಟೀಲ ಸ್ವಾಗತಿಸಿದರು.

ಕೃಷಿ ಮಾರುಕಟ್ಟೆಗೆ ಪ್ರಥಮ ಬಾರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಅವರನ್ನು ನೂತನ ಅಡಳಿತ ಮಂಡಳಿ ಸನ್ಮಾನಿಸಿತು. ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿತು. ವರ್ತಕರ ಸಂಘ, ಮಾರುಕಟ್ಟೆ ನೌಕರರ ಸಂಘ ಸೇರಿದಂತೆ ಅನೇಕರು ಸಚಿವರನ್ನು ಅಭಿನಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-32-139017150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.