ಭಾನುವಾರ, ಮೇ 9, 2021
24 °C

ಮಸ್ಕಿ ವಿಧಾನಸಭೆ ಉಪಚುನಾವಣೆ: ಮತದಾನ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಮಸ್ಕಿ (ರಾಯಚೂರು): ವಿಧಾನಸಭೆ ಉಪಚುನಾವಣೆಗೆ ಮತದಾನ ನಡೆಯುವ ಮುನ್ನಾದಿನ ಶುಕ್ರವಾರ ಮಸ್ಕಿ ಪಟ್ಟಣದ ದೇವನಾಂಪ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವಿಎಂ, ವಿವಿ ಪ್ಯಾಟ್ ಹಾಗೂ‌ ಕಂಟ್ರೋಲರ್  ಯಂತ್ರಗಳ ಜೋಡಣೆ ಮತ್ತು ವಿತರಣೆ ಕಾರ್ಯ ಕೈಗೊಳ್ಳಲಾಗಿದೆ.

ಕ್ಷೇತ್ರದಾದ್ಯಂತ ಒಟ್ಟು 305 ಮತಗಟ್ಟೆಗಳಿದ್ದು, 2,369 ಸಿಬ್ಬಂದಿ ನಿಯೋಜಿಸಲಾಗಿದೆ.

ಮತದಾನ ನಡೆಸುವುದಕ್ಕೆ ಯಂತ್ರಗಳ ಪೂರ್ವ ಸಿದ್ಧತೆ ಹಾಗೂ ಸಿಬ್ಬಂದಿಗೆ ಸೂಕ್ತ ನಿರ್ದೇಶನಗಳನ್ನು ಹಿರಿಯ ಅಧಿಕಾರಿಗಳು ನೀಡುತ್ತಿದ್ದಾರೆ.

ಸರ್ಕಾರಿ‌ ಬಸ್ ನೌಕರರು‌ ಮುಷ್ಕರ ನಡೆಸುತ್ತಿರುವುದರಿಂದ ಖಾಸಗಿ ಶಾಲಾ‌ ವಾಹನಗಳು ಮತ್ತು ಕ್ರೂಸರ್ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಶನಿವಾರ ಸಂಜೆ ಸಿಬ್ಬಂದಿ ಮತಗಟ್ಟೆಗಳಿಗೆ ಮತದಾನ ಯಂತ್ರಗಳ ಸಮೇತ ತೆರಳುವರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು