ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಕ್ಷೇತ್ರದ ಕಾರ್ಯಕರ್ತರ ಗೆಲುವು: ಡಿ.ಎಸ್ ಹೂಲಗೇರಿ

Last Updated 3 ಮೇ 2021, 4:12 IST
ಅಕ್ಷರ ಗಾತ್ರ

ಮುದಗಲ್: ‘ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರವಿಹಾಳರ ಗೆಲುವು ಕಾರ್ಯಕರ್ತರ ಗೆಲುವು’ ಎಂದು ಲಿಂಗಸುಗೂರು ಶಾಸಕ ಡಿ.ಎಸ್ ಹೂಲಗೇರಿ ಅಭಿಪ್ರಾಯಪಟ್ಟರು.

‘ಮಸ್ಕಿ ಕ್ಷೇತ್ರದ ಕಾರ್ಯಕರ್ತರು ಸಾಮೂಹಿಕವಾಗಿ ಕೆಲಸ ಮಾಡಿದ್ದರಿಂದ ಗೆಲ್ಲಲು ಸಾಧ್ಯವಾಯಿತು. ಬಸನಗೌಡರನ್ನು ಎಲ್ಲರೂ ಸೇರಿ ಪಕ್ಷಕ್ಕೆ ಕರೆತಂದೆವು. ಮಸ್ಕಿ ಕ್ಷೇತ್ರದ ಜನ ಕಾಂಗ್ರೆಸ್ ಪಕ್ಷ ಹಾಗೂ ಬಸನಗೌಡರ ಪರವಾಗಿ ಇದ್ದರು. ಉಪ ಚುನಾವಣೆ ಫಲಿತಾಂಶ ಹೊರಬಂದಿದ್ದು ಅವರು 30641 ಮತಗಳ ಅಂತರದಿಂದ ಜಯಗಳಿಸಿದ್ದಾರೆ’ ಎಂದರು.ಕ್ಷೇತ್ರದದಲ್ಲಿ ಸ್ವಾಭಿಮಾನಕ್ಕೆ ಜಯ ಸಿಕ್ಕಿದೆ. ನಮಗೆ ಸಂತೆಕಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜವಾಬ್ದಾರಿ ನೀಡಿದ್ದರು. ಇಲ್ಲಿ 6600 ಮತಗಳ ಅಂತರ ಬಂದಿದೆ. ಮಸ್ಕಿ ಕ್ಷೇತ್ರದ ಜನರು ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರ ನೀಡಿದಕ್ಕೆ ಅವರು ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಜನರ ಸೇವೆ ಮಾಡಲಿದ್ದಾರೆ ಎಂದರು. ಕಾಂಗ್ರೆಸ್ ಹಿರಿಯರು ಮುಖಂಡ ಶರಣಪ್ಪ ಮೇಟಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ್ ಪಾಟೀಲ, ಹೊನ್ನಪ್ಪ ಮೇಟಿ, ನೈಮತ್ ಉಲ್ಲ ಖಾದ್ರಿ, ಬಸವರಾಜ್ ಲೆಕ್ಕಿಹಾಳ, ಚನ್ನಾವೀರಪ್ಪ ಪಾಗದ್ ಹಾಗೂ ತಮ್ಮಣ್ಣ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT