ಮಸ್ಕಿ: ‘ಹೂಗಾರ ಸಮಾಜದ ಸೇರಿದಂತೆ ಎಲ್ಲಾ ಸಮಾಜದ ಅಭಿವೃದ್ಧಿಗೆ ಸಂಘಟನೆಯೇ ಪ್ರಮುಖ ಶಕ್ತಿ’ ಎಂದು ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಶರಣ ಹೂಗಾರ ಮಾದಯ್ಯ ಜಯಂತಿ ಹಾಗೂ ವೃತ್ತ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಂಪಾಪತಿ ಹೂಗಾರ ಮಾತನಾಡಿ, ‘ಹೂಗಾರ ಸಮಾಜದ ಆರ್ಥಿಕವಾಗಿ ಹಿಂದುಳಿದಿದೆ. ಸಮಾಜದ ಜನ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು’ ಎಂದರು.

ವೆಂಕಟೇಶ ಹೂಗಾರ ಮಾತನಾಡಿ, ‘ಹೂಗಾರ ಸಮಾಜವು ಸಾವಿರಾರು ವರ್ಷಗಳಿಂದ ಹಿಂದುಳಿದಿದ್ದು, ಸರ್ಕಾರದ ಗಮನ ಸೆಳೆಯಲು ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸುವ ಅಗತ್ಯವಿದೆ. ಸಮಾಜದ ಶಕ್ತಿ ಪ್ರದರ್ಶನದ ಮೂಲಕ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹೂಗಾರ ನಿಗಮ ಮಂಡಳಿ ರಚನೆಗಾಗಿ ಒತ್ತಡ ತರುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಹೂಗಾರ ಮಾದಯ್ಯ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ಪಟ್ಟಣದ ಹೊರವಲಯದ ಕೆಪಿಎಸ್ ಕಾಲೇಜು ಸಮೀಪ ನೂತನ ವೃತ್ತವನ್ನು ಉಟಕನೂರಿನ ಮರಿಬಸವ ಲಿಂಗ ಸ್ವಾಮಿಗಳು, ವರ ರುದ್ರಮುನಿ ಶಿವಾಚಾರ್ಯರು ಉದ್ಘಾಟಿಸಿದರು.

ವೀರೇಶ ಹೂಗಾರ, ಬಸಣ್ಣ ಬೆಲ್ಲದ ಮರಡಿ, ಬಸವರಾಜ ಮಾರಲದಿನ್ನಿ, ಭೀಮಣ್ಣ ಸಿಂಧನೂರು, ಮಲ್ಲಿಕಾರ್ಜುನ ಹುಲ್ಲೂರು ಇತರರು ಇದ್ದರು.

ಮಸ್ಕಿಯಲ್ಲಿ ಶನಿವಾರ ನಡೆದ ಹೂಗಾರ ಮಾದಯ್ಯ ಜಯಂತಿ ನಿಮಿತ್ತ ನಡೆದ ಭಾವಚಿತ್ರದ ಮೆರವಣಿಗೆಗೆ ವರುರುದ್ರಮುನಿ ಸ್ವಾಮೀಜಿ, ಉಟಕನೂರಿನ ಮರಿ ಬಸವಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-32-570259532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.