ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಜಲಾಶಯ: ನೀರು ಬಿಡುವ ಸಾಧ್ಯತೆ

ಒಳ ಹರಿವು ಹೆಚ್ಚಳ: ಹಿರೇಹಳ್ಳದಲ್ಲಿ ಇಳಿಯದಂತೆ ಗ್ರಾಮಸ್ಥರಿಗೆ ಎಚ್ಚರಿಕೆ
Last Updated 9 ಜುಲೈ 2021, 12:34 IST
ಅಕ್ಷರ ಗಾತ್ರ

ಮಸ್ಕಿ: ರಾಜ್ಯದಲ್ಲಿ ಜುಲೈ 15 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಪ್ರಕಟಿಸಿರುವ ಕಾರಣ ತಾಲ್ಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಹಿರೇಹಳ್ಳಕ್ಕೆ ನೀರು ಬಿಡುವ ಸಾಧ್ಯತೆ ಇದೆ.

ಜಲಾಶಯದ ಕೆಳ ಭಾಗದ ಗ್ರಾಮಸ್ಥರು ಮಸ್ಕಿ ಹಿರೇಹಳ್ಳದಲ್ಲಿ ಇಳಿಯದಂತೆ ಮಸ್ಕಿ ಜಲಾಶಯ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಾವುದ್ ಮನವಿ ಮಾಡಿದ್ದಾರೆ.

ಮಸ್ಕಿ ಜಲಾಶಯದಲ್ಲಿ ಈಗಾಗಲೇ 23 ಅಡಿ ನೀರು ಸಂಗ್ರಹವಾಗಿದೆ. ಭರ್ತಿಯಾಗಲು ಇನ್ನೂ 6 ಅಡಿ ನೀರು ಮಾತ್ರ ಬರಬೇಕಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯದ ಒಳ ಹರಿವು ಹೆಚ್ಚಿದೆ. ಯಾವುದೇ ಕ್ಷಣದಲ್ಲಿ ಜಲಾಶಯ ಭರ್ತಿಯಾಗಲಿದ್ದು, ಹೆಚ್ಚುವರಿ ನೀರನ್ನು ಮಸ್ಕಿ ಹಳ್ಳಕ್ಕೆ ಹರಿಬಿಡಲಾಗುತ್ತಿದ್ದರಿಂದ ಪ್ರವಾಹ ಉಂಟಾಗಲಿದೆ. ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಹಳ್ಳದಲ್ಲಿ ಬಿಡದಂತೆ ಹಾಗೂ ಹಳ್ಳದಲ್ಲಿ ಯಾರು ಹೋಗದೇ ಇರುವಂತೆ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT