ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಕುಡಿಯುವ ನೀರಿಗೆ ಪರದಾಟ

ಅಂಬೇಡ್ಕರ್ ಪ್ರತಿಮೆ ಎದುರು ಖಾಲಿ ಕೊಡಗಳೊಂದಿಗೆ ಮಹಿಳೆಯರ ಪ್ರತಿಭಟನೆ
Last Updated 13 ಏಪ್ರಿಲ್ 2022, 12:33 IST
ಅಕ್ಷರ ಗಾತ್ರ

ಮಸ್ಕಿ: ಎಂಟು ದಿನಗಳಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಕುಡಿಯುವ ನೀರಿನ ಘಟಕಕ್ಕೆ ಕೆರೆಯಿಂದ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಹೊಡೆದಿದ್ದರಿಂದ ಈ ಅವ್ಯವಸ್ಥೆ ಉಂಟಾಗಿದೆ. ಪುರಸಭೆ ಸಿಬ್ಬಂದಿಯಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ನಡುವೆ ಕಳೆದ ಎಂಟು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಕಾರಣ ಪ್ರಮುಖ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಿಸುವಂತಾಗಿವೆ.

ಪಟ್ಟಣದ ನಾಲ್ಕನೇ ವಾರ್ಡ್‌ನ ಮಹಿಳೆಯರು ಖಾಲಿ ಕೊಡಗಳೊಂದಿಗೆ ಬುಧವಾರ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ ಕುಡಿಯುವ ನೀರು ಕೊಡಿ ಎಂದು ಆಗ್ರಹಿಸಿದ ಘಟನೆ ಕೂಡ ನಡೆಯಿತು.

ದಿನಬಿಟ್ಟು ದಿನ ನೀರು‌ ಪೂರೈಸಿ ಎಂದರೂ ಪುರಸಭೆ ಮುಖ್ಯಾಧಿಕಾರಿ ಅವರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ‌. ವಾಟರ್ ಮನ್‌ಗಳು ಸರಿಯಾಗಿ ನೀರು ಪೂರೈಕೆ ನಿರ್ವಹಣೆ ಮಾಡುತ್ತಿಲ್ಲ ಎಂದು ಪ್ರತಿಭಟನೆ ನಿರತ ಮಹಿಳೆಯರು ಆರೋಪಿಸಿದರು.

ನಾಲ್ಕನೇ ವಾರ್ಡ್‌ಗೆ ಪೈಪ್‌ಲೈನ್ ಕಾಮಗಾರಿಗೆ ಟೆಂಡರ್ ಕರೆದು ‌ತಿಂಗಳುಗಳೇ ಕಳೆದಿವೆ. ಇದುವರೆಗೆ ಗುತ್ತಿಗೆದಾರರು ಕಾಮಗಾರಿ ಆರಂಭಿಸಿಲ್ಲ. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಭದ್ರಿ ಕೋಠಾರಿ ಆರೋಪಿಸಿದರು.

ಹಾಳಾದ ಪೈಪ್: ಪಟ್ಟಣದ 23 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮುಖ್ಯ ಪೈಪ್ ಹೊಡೆದು ಹೋಗಿ ಒಂದು ವಾರವಾಗಿದೆ. ಪುರಸಭೆ ಸಿಬ್ಬಂದಿ ಪೈಪ್‌ಲೈನ್ ದುರಸ್ತಿಗೆ ಹರ ಸಾಹಸ ಪಡುತ್ತಿದ್ದರೂ ಸಹ ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.

ಪೈಪ್‌ಲೈನ್ ಹಾಳಾಗಿದ್ದರಿಂದ ಕೆಲವೊಂದು 6 ಮತ್ತು 7ನೇ ವಾರ್ಡ್ ಸೇರಿದಂತೆ ಕೆಲವೊಂದು ವಾರ್ಡ್‌ಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದರಿಂದ ಬೇಸತ್ತ ಸಾರ್ವಜನಿಕರು ಪುರಸಭೆ ಅಧಿಕಾರಿ ಹಾಗೂ ನೀರು ಬಿಡುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಒಂದು‌ ವಾರದಿಂದ ನೀರು ಪೂರೈಕೆ ಆಗದಿದ್ದ ಬಗ್ಗೆ ಪುರಸಭೆ ಸಿಬ್ಬಂದಿಯನ್ನು ಕೇಳಿದರೆ ಬೇಜವ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಭದ್ರಿ ಕೋಠಾರಿ ಆರೋಪಿಸಿದ್ದಾರೆ.

**

ಕುಡಿಯುವ ನೀರಿನ ಪೈಪ್ ಹೊಡೆದ ಕಾರಣ ನೀರಿನ ಅವ್ಯವಸ್ಥೆಯಾಗಿತ್ತು. ನೀರಿನ ಪೈಪ್‌ ಸರಿಪಡಿಸಲಾಗಿದ್ದು ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.

- ಹನುಮಂತಮ್ಮ ನಾಯಕ, ಮುಖ್ಯಾಧಿಕಾರಿ ಪುರಸಭೆ ಮಸ್ಕಿ

**

ಪಟ್ಟಣದಲ್ಲಿ ಅವೈಜ್ಞಾನಿಕ ಪೈಪ್‌ಲೈನ್ ಅಳವಡಿಕೆಯಿಂದ ವಾರ್ಡ್‌ಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ‌. ಪುರಸಭೆ ಆಡಳಿತ ಮಂಡಳಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ.

- ಭದ್ರಿ ಕೋಠಾರಿ, ಅಧ್ಯಕ್ಷರು ಎನ್‌ಎಸ್‌ಐಯು ಸಂಘಟನೆ, ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT