ಮಸ್ಕಿ: ‘ವಕೀಲರ ಸಂಘದ ತಾಲ್ಲೂಕು ಘಟಕದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಪ್ಪ ನಾಗರಬೆಂಚಿ ಹಾಗೂ ಉಪಾಧ್ಯಕ್ಷರಾಗಿ ಅಮರೇಗೌಡ ಸಂಜಿ ಆಯ್ಕೆಯಾಗಿದ್ದಾರೆ’ ಎಂದು ಚುನಾವಣಾಧಿಕಾರ ಪಂಪನಗೌಡ ಪೊಲೀಸ ಪಾಟೀಲ ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ 8ರಿಂದ ಚುನಾವಣೆ ನಡೆದಿತ್ತು. ವೀರಭದ್ರಪ್ಪ ಎಚ್. ಅವರು 45 ಮತ ಪಡೆದರೆ ರಾಮಣ್ಣ ನಾಯಕ 41 ಮತ ಪಡೆದುಕೊಂಡರು.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಲ್ಲಪ್ಪ ನಾಗರಬೆಂಚಿ 30 ಮತ ಪಡೆದರೆ ನಬಿ ರಸೂಲ್ ಶೆಡಮಿ 24 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಮರೇಗೌಡ ಸಂಜಿ 51 ಮತ ಪಡೆದರೆ, ಶಿವಕುಮಾರ ಹಿರೇಮಠ 35 ಮತ ಪಡೆದುಕೊಂಡರು.

91 ಮತದಾರರಲ್ಲಿ 86 ಮತದಾರರು ಮತ ಚಲಾಯಿಸಿದರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.