ಕವಿತಾಳ: ‘ಚಿನ್ನದ ಬೆಲೆ ಗಗನಕ್ಕೇರಿದ್ದು ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಚಿನ್ನ ಖರೀದಿಗೆ ಹಿಂದೇಟು ಹಾಕುವಂತಹ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳು ಹೆಚ್ಚು ಪ್ರಸ್ತುತ’ ಎಂದು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಹಿರೇಹಣಿಗಿ ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮದುವೆಗೆ ದುಂದು ವೆಚ್ಚ ಮಾಡಿ, ಆರ್ಥಿಕವಾಗಿ ನಷ್ಟ ಅನುಭವಿಸುವ ಬಡ ಕುಟುಂಬಗಳ ಪಾಲಿಗೆ ಸಾಮೂಹಿಕ ವಿವಾಹ ಸಮಾರಂಭಗಳು ವರದಾನವಾಗಿವೆ’ ಎಂದು ಹೇಳಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ‘ಪುಣ್ಯ ಭೂಮಿಯಲ್ಲಿ ಸ್ವಾಮೀಜಿ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಂಪತಿ ಸಾಮರಸ್ಯದ ಜೀವನ ನಡೆಸುವ ಮೂಲಕ ಮಾದರಿಯಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಭವಿಷ್ಯ ರೂಪಿಸಬೇಕು’ ಎಂದರು.

10 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಆಯೋಜಕ ಜಾಲಹಳ್ಳಿಯ ನಾಗಯ್ಯತಾತ ಗುರುವಿನ, ಗೌಡನಭಾವಿಯ ಅಮರೇಶ ಸ್ವಾಮಿ, ಶಿವಬಸನಗೌಡ ಹಣಗಿ, ಸದಾಶಿವ ತಾತ ಮುಂಡರಗಿ, ಶಿವಶಂಕ್ರಪ್ಪ ಪೂಜಾರಿ ಪಾತಾಪುರು, ಕರಿಯಣ್ಣ ಜಡೆ ಪೂಜಾರಿ, ಶಿವಣ್ಣ ಪೂಜಾರಿ ಹಣಿಗಿ, ಭೀರಪ್ಪ ಪೂಜಾರಿ ಹಳ್ಳಿ ಹೊಸೂರು, ರಾಮಣ್ಣ ಪೂಜಾರಿ ಮಾಡಗಿರಿ, ಲಿಂಗಣ್ಣ ಪೂಜಾರಿ ಬಳಗಾನೂರು, ರಂಗಣ್ಣ ಪೂಜಾರಿ, ಲಿಂಗಣ್ಣ, ಸಿದ್ದಣ್ಣ ಚಾಗಬಾವಿ, ಬಸವರಾಜ ಸ್ವಾಮಿ, ವೀರೇಶ ಸ್ವಾಮಿ, ಬಸವರಾಜಪ್ಪ ತಾತ, ಯಮನಪ್ಪ ದಿನ್ನಿ, ಶಿವರಾಜ ಪಾಟೀಲ, ತಿಮ್ಮನಗೌಡ ಮತ್ತು ಮೇಲ್ವಿಚಾರಕಿ ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.