ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋಕೃಪಾಮೃತ ಜಲದಿಂದ ಭೂಮಿಗೆ ನವಚೈತನ್ಯ’

ಜಿಲ್ಲಾ, ತಾಲ್ಲೂಕು ಸಂಯೋಜಕರ ವಿಶೇಷ ಕಾರ್ಯಾಗಾರ
Last Updated 4 ಏಪ್ರಿಲ್ 2021, 13:33 IST
ಅಕ್ಷರ ಗಾತ್ರ

ಸಿಂಧನೂರು: ಮಣ್ಣಿಗೆ ಮತ್ತು ಬೆಳೆಗಳಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗುವ ಒಂದು ಸೂಕ್ಷ್ಮಜೀವಿಗಳ ಗುಂಪು ಅಥವಾ ಸಮುಚ್ಛಯವನ್ನು ಗೋಕೃಪಾಮೃತ ಜಲ ಎಂದು ಕರೆಯುತ್ತೇವೆ. ಇದು ಬೆಳೆಗಳಿಗೆ ನವ ಚೈತನ್ಯವನ್ನು ತಂದು ಕೊಡುವುದಲ್ಲದೆ, ಇಳುವರಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ವಿಕಾಸ ಅಕಾಡೆಮಿಯ ವಿಭಾಗ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಹೇಳಿದರು.

ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗೂ ವಿಕಾಸ ಅಕಾಡೆಮಿ ಕಲಬುರ್ಗಿ ಸಹಯೋಗದಲ್ಲಿ ಶನಿವಾರ ನಡೆದ ಅಕಾಡೆಮಿಯ ಜಿಲ್ಲಾ ಮತ್ತು ತಾಲ್ಲೂಕು ಸಂಯೋಜಕರ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ವೇದ ಸಂಸ್ಕೃತಿಯ ಪುನರುಜ್ಜೀವನ ಆಗಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು 2006 ರಲ್ಲಿ ಗುಜರಾತ್‍ನ ಅಹಮದಾಬಾದ್‍ನಲ್ಲಿ ಬನ್ಸಿ ಗಿರ್ ಗೋಶಾಲೆಯನ್ನು ಗೋಪಾಚಬಾಯಿ ಸುತಾರಿಜೀ ಆರಂಭ ಮಾಡಿದ್ದಾರೆ. ಗೋ ಆಧಾರಿತ ಕೃಷಿಯ ಕುರಿತು ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸುತ್ತಾ, ಹಲವಾರು ವರ್ಷಗಳ ಸಂಶೋಧನೆಯ ಫಲವಾಗಿ ದೇಸಿ ಹಸುವಿನ ಪಂಚಗವ್ಯ ವಸ್ತುಗಳನ್ನು ಬಳಸಿಕೊಂಡು ತಯಾರು ಮಾಡಿದ ಉತ್ಪನ್ನವೇ ಗೋಕೃಪಾಮೃತ ಜಲವಾಗಿದೆ ಎಂದರು.

ಆದ್ದರಿಂದಲೇ ಏ.18 ರಂದು ಕಲಬುರ್ಗಿ ಸುತಾರಿಜೀ ಆಗಮಿಸಿ ಗೋ ಕೃಪಾಮೃತದ ಮಹತ್ವ, ಮಹಿಳೆಯರ ಮತ್ತು ಯುವ ಸಬಲೀಕರಣ ಬಗ್ಗೆ ಅರಿವು ಮೂಡಿಸಲಿದ್ದಾರೆ. ಆದ್ದರಿಂದ ಪ್ರತಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೋವಿಡ್-19 ನೋಡಲ್‌ ಅಧಿಕಾರಿ ಡಾ.ಜೀವನೇಶ್ವರಯ್ಯ, ಸಂಯೋಜಕ ಈರೇಶ ಇಲ್ಲೂರು ವಕೀಲ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಸಂಯೋಜಕರಾದ ಸರಸ್ವತಿ ಪಾಟೀಲ್, ಚಂದ್ರಕಲಾ ಪ್ರಕಾಶ, ಶಿವರಾಜ, ಶಿವನಗೌಡ, ಸುನೀತಾ, ರಜಿಯಾ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸಂಯೋಜಕರು ಭಾಗವಹಿಸಿದ್ದರು. ರೇವಣಸಿದ್ದಪ್ಪ ಜಲಬಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT