ಮಂತ್ರಾಲಯದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ

ರಾಯಚೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಬೆಳಗಿನ ಜಾವ ಮಂತ್ರಾಲಯಕ್ಕೆ ಬಂದಿದ್ದು, ಶ್ರೀರಾಘವೇಂದ್ರ ಸ್ವಾಮಿ ವೃಂದಾವನ ದರ್ಶನ ಮಾಡಿಕೊಂಡು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಗೆ ನಮಸ್ಕರಿಸಿದರು.
ಆನಂತರ ಕೆಲಕಾಲ ಕುಶಲೋಪರಿ ಮಾತುಕತೆ ನಡೆಯಿತು. ರಾಯಚೂರು ಜಿಲ್ಲಾ ಬಿಜೆಪಿ ಕೆಲವು ಕಾರ್ಯಕರ್ತರು ಜೊತೆಗಿದ್ದರು.
10 ಗಂಟೆಗೆ ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.