ಗುರುವಾರ , ನವೆಂಬರ್ 14, 2019
19 °C

ಅಧಿಕಾರಿ ವಿರುದ್ಧ ಶಾಸಕ ಆಕ್ರೋಶ!

Published:
Updated:

ರಾಯಚೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಮಾನ್ವಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು. ‘ಗುತ್ತಿಗೆದಾರರು ಜೆಡಿಎಸ್‌ ಕಾರ್ಯಕರ್ತರಾಗಿದ್ದಾರೆ’ ಎಂದು ಪಂಚಾಯತ್‌ರಾಜ್‌ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಸ್ತಾಪಿಸುತ್ತಿದ್ದಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶದಿಂದ ಎದ್ದು ನಿಂತರು.

‘ಅವರೇಕೆ ಜೆಡಿಎಸ್‌ ಕಾರ್ಯಕರ್ತರಾಗುತ್ತಾರೆ’ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಕುಳಿತ ಜಾಗದಿಂದ ಅಧಿಕಾರಿ ಕಡೆಗೆ ಬೆರಳು ಮಾಡಿ ಮಾತನಾಡಿದ ವಿಡಿಯೋ ದೃಶ್ಯಾವಳಿಗಳು ಸೆರೆಯಾಗಿವೆ. ಆಸನದಲ್ಲಿ ಕುಳಿತ ನಂತರವೂ ಆಕ್ರೋಶದಿಂದ ಅಧಿಕಾರಿಗೆ ಎಚ್ಚರಿಕೆ ನೀಡುತ್ತಿದ್ದ ದೃಶ್ಯಾವಳಿಗಳಿವೆ.

ಪ್ರತಿಕ್ರಿಯಿಸಿ (+)