ಮುದಗಲ್: ಪಟ್ಟಣದ ಕುಂಬಾರಪೇಟೆ ಬಸವೇಶ್ವರ ಜಾತ್ರೆ ನಿಮಿತ್ತ ನೀಲಕಂಠೇಶ್ವರ ದೇವಸ್ಥಾನದಿಂದ ಬಸವೇಶ್ವರ ದೇವಸ್ಥಾನದವರೆಗೆ ಮಹಿಳೆಯರಿಂದ ತನಾರತಿ ಮೆರವಣಿಗೆ ಜರುಗಿತು.

ನಂದವಾಡಗಿ ಚನ್ನಬಸವ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಆರಂಭವಾರ ತನಾರತಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಭಾಜಾ ಭಜಂತ್ರಿಗಳೊಂದಿಗೆ ಸಾಗಿತು. ನೂರಾರು ಮಹಿಳೆಯರು ತನಾರತಿ ಹೊತ್ತು ಸಾಗಿದರು.

ಶಿವಾನಂದ ಸುಂಕದ, ಮಲ್ಲಪ್ಪ ಮಾಟೂರು, ಅಮರೇಶ ತಲೇಖಾನ, ವೀರೇಶ ಖೇಣೇದ್, ಸಂಗಮೇಶ, ಮಹಾಂತೇಶ ಗದ್ದಿ , ಸಂತೋಷ ಸುರಪುರ, ವೀರಭದ್ರಯ್ಯ ಸರಗಣಾಚಾರಿ, ವೀರೇಶ ಗದ್ದಿ, ಶಶಿಕಲಾ ಭೋವಿ, ಸುವರ್ಣ ಸುಂಕದ, ತೋಟಮ್ಮ ಹಳೇಪೇಟೆ, ವಿಜಯಲಕ್ಷ್ಮಿ ಮಾಟೂರು, ಶಿವಮ್ಮ ಗದ್ದಿ ಇದ್ದರು.

‘ಅಭಿವೃದ್ಧಿಗೆ ಹಣ ನೀಡುತ್ತಿಲ್ಲ’: ‘ರಾಜ್ಯ ಸರ್ಕಾರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ’ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪಟ್ಟಣದ ಕುಂಬಾರಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವ ನಿಟ್ಟಿನಲ್ಲಿ ಈಗಾಗಲೇ ನಾಲ್ಕು ಲಕ್ಷ ಕೋಟಿ ಸಾಲ ಮಾಡಿದೆ. ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ ಮುಳುಗಿದೆ. ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಅನುದಾನ ನೀಡಿ ನೀಡುತ್ತಿಲ್ಲ. ಯುವಕರಿಗೆ ಉದ್ಯೋಗ ಮಹಿಯರಿಗೆ ಕೈಗಾರಿಕೆ ಮತ್ತು ಗುಳೆ ತಪ್ಪಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾದರೆ ಸರ್ಕಾರ ಮಾತ್ರ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ನೀಡದೇ ತಾರತಮ್ಯ ನೀತಿ ಮುಂದುವರಿಸಿದೆ’ ಎಂದರು.

ಸನಾತನ ಸಂಸ್ಕೃತಿ ಹಾಗೂ ಧರ್ಮದ ಸಂರಕ್ಷಣೆಗಾಗಿ ಇಂತಹ ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಸನ್ಮಾರ್ಗದ ಜೀವನ, ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದರು.

ನಂದವಾಡಗಿಯ ಚೆನ್ನಬಸವ ಶಿವಯೋಗಿಗಳು, ಅಮರೇಶ್ವರ ಚರಿತಾಮೃತ ಪುರಾಣ ಪಠಣ ಮಾಡಿದರು.

ಪ್ರತಾಪಕುಮಾರ ಕುಷ್ಟಗಿ ತಬಲಾ ಸಾಥ್ ನೀಡಿದರು.

ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮನವಿ: ಪಟ್ಟಣದ ಕುಂಬಾರಪೇಟೆ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ನೀಡಬೇಕು ಎಂದು ದೇವಸ್ಥಾನ ಸಮಿತಿ ಮುಖಂಡರು ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಮನವಿ ಸಲ್ಲಿಸಿದರು.

ಬಸವ ಜಯಂತಿ ನಿಮಿತ್ತ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ 10 ದಿನಗಳಿಂದ ನಡೆಯುತ್ತಿರುವ ಪುರಾಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ವಜ್ಜಲ್ ಅವರನ್ನು ಗೌರವಿಸಿ, ‘ದೇವಸ್ಥಾನ ಸಭಾಂಗಣ ಅಭಿವೃದ್ಧಿ ಪಡಿಸಲು ಟಿನ್ ಶೆಡ್ ನಿರ್ಮಾಣ ಮಾಡಬೇಕು. ಈಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ₹10 ಲಕ್ಷ ಅನುದಾನ ನೀಡಬೇಕು’ ಎಂದು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ವಜ್ಜಲ್, ‘ಹಂತ ಹಂತವಾಗಿ ಅನುದಾನ ಮೀಸಲಿರಿಸಿ ದೇವಾಲಯದ ಜೀರ್ಣೋದ್ಧಾರಕ್ಕೆ ಸಹಕರಿಸುತ್ತೇನೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಹಾಳ, ಮುದಗಲ್ ನಗರ ಘಟಕದ ಅಧ್ಯಕ್ಷ ಕರಿಯಪ್ಪ ಯಾದವ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಣ್ಣ ಮಟೂರು, ಶಿವಾನಂದ ಸುಂಕದ್, ಬಸವರಾಜ ಬಳೆಗಾರ, ವೀರೇಶ ಖೇಣೇದ, ಮಹಾಂತೇಶ್ ಗದ್ದಿ, ಶರಣಪ್ಪ ಕುಂಬಾರ , ಚೆನ್ನಪ್ಪ ಕುಂಬಾರ, ಸಂಗಮೇಶ ಸರಗಣಾಚಾರಿ, ಅಮರೇಶಪ್ಪ ತಲೇಖಾನ, ವೀರಭದ್ರಯ್ಯ, ವೀರೇಶ, ಬಸವರಾಜ ಚೌದರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-32-2035183782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.