ಮುದಗಲ್: ಪಟ್ಟಣದ ಕ್ಲಿನಿಕ್ ಹಾಗೂ ನಕಲಿ ವೈದ್ಯರ ವಿರುದ್ಧ ಜಿಲ್ಲಾ ನಕಲಿ ಕ್ಲಿನಿಕ್ ಹಾಗೂ ವೈದ್ಯರ ನಿರ್ಮೂಲನೆ ಸಕ್ಷಮ ಪ್ರಾಧಿಕಾರದ ಅಧ್ಯಕ್ಷ ಶಂಕರಗೌಡ ಪಾಟೀಲ ಸೋಮವಾರ ದಾಳಿ ನಡೆಸಿದರು.

‘ಹೆಚ್ಚಿದ ನಕಲಿ ಕ್ಲಿನಿಕ್, ವೈದ್ಯರ ಹಾವಳಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಮೇ 30 ರಂದು ವರದಿ ಪ್ರಕಟವಾಗಿತ್ತು. ಎಚ್ಚೆತ್ತ ಜಿಲ್ಲಾ ನಕಲಿ ಕ್ಲಿನಿಕ್ ಹಾಗೂ ವೈದ್ಯರ ನಿರ್ಮೂಲನೆ ಸಕ್ಷಮ ಪ್ರಾಧಿಕಾರ ನಕಲಿ ಕ್ಲಿನಿಕ್ ವಿರುದ್ಧ ದಾಳಿ ಮಾಡಿದೆ.

ಸಕ್ಷಮ ಪ್ರಾಧಿಕಾರದ ಅಧ್ಯಕ್ಷ ಶಂಕರಗೌಡ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ,‘ನಕಲಿ ಕ್ಲಿನಿಕ್ ಹಾಗೂ ವೈದ್ಯರ ಹಾವಳಿ ಹೆಚ್ಚಾಗಿದೆ ಎಂಬ ಮಾಹಿತಿ ಆಧರಿಸಿ ಪಟ್ಟಣದಲ್ಲಿ ದಾಳಿ ನಡೆಸಿದ್ದೇವೆ. ಕೆಲ ಕಡೆ ಅನಧಿಕೃತ ಚಿಕಿತ್ಸೆ ನೀಡುವುದು ಕಂಡು ಬಂದಿದೆ. ಕೆಲ ನಕಲಿ ವೈದ್ಯರು ಕ್ಲಿನಿಕ್ಗಳಿಗೆ ಬೀಗ ಹಾಕಿದ್ದರು. ನಕಲಿ ವೈದ್ಯರಿಗೆ ನೋಟಿಸ್ ನೀಡುತ್ತೇವೆ’ ಎಂದರು.

ಪ್ರಾಧಿಕಾರದ ಸದಸ್ಯ ಅಮರೇಶ ಪಾಟೀಲ, ವೈದ್ಯಾಧಿಕಾರಿ ದ್ಯಾಮಣ್ಣ ಹುಲ್ಲೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-32-259913608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.