ಮುದಗಲ್: ಶನಿವಾರ ತಡ ರಾತ್ರಿ ಸುರಿದ ಗಾಳಿ, ಮಳೆಗೆ ಮುದಗಲ್ ಸಮೀಪದ ಪಿಕಳಿಹಾಳ ಗ್ರಾಮದಲ್ಲಿ 14 ಎಕರೆ ಪಪ್ಪಾಯಿ ಬೆಳೆ ನಾಶವಾಗಿದೆ.

ಭಾರಿ ಗಾಳಿಗೆ ಪಪ್ಪಾಯಿ ಗಿಡಗಳು ನೆಲಕ್ಕೆ ಬಿದ್ದಿವೆ. ಇದರಿಂದಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪಿಕಳಿಹಾಳ ಗ್ರಾಮದ ಸೋಮರೆಡ್ಡಿ ಅವರಿಗೆ ಸೇರಿದ 8 ಎಕರೆ, ಗ್ಯಾನಪ್ಪ, ಚತ್ರಪ್ಪ ಅವರ 6 ಎಕರೆ ಬೆಳೆ ಹಾನಿಯಾಗಿದೆ.

ಸೋಮರೆಡ್ಡಿ ಅವರು ತೋಟದಲ್ಲಿ 4 ಸಾವಿರ ಪಪ್ಪಾಯಿ ಗಿಡಗಳನ್ನು ನೆಟ್ಟಿದ್ದರು. ಇದರಲ್ಲಿ 2,500 ಗಿಡಗಳು ನೆಲಸಮವಾಗಿವೆ. ಒಂದು ಗಿಡಕ್ಕೆ 70 ಕೆ.ಜಿ ಹಣ್ಣು ಬರುತ್ತಿತ್ತು. 800 ಟನ್ನಷ್ಟು ಪಪ್ಪಾಯಿ ನಷ್ಟವಾಗಿದೆ. ಕಟಾವಿಗೆ ಬಂದಿದ್ದ ಗಿಡದಲ್ಲಿದ್ದ 100 ಟನ್ನಷ್ಟು ಪಪ್ಪಾಯಿ ಗಾಳಿ ಮಳೆಗೆ ನೆಲಕ್ಕೆ ಉರುಳಿದೆ. ಜಮೀನುಗಳಲ್ಲಿನ ವಿದ್ಯುತ್ ಕಂಬಗಳು ಧರೆಗುರುಳಿವೆ. ಬನ್ನಿಗೋಳ ಹಳ್ಳ ತುಂಬಿ ಹರಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-32-1937443668

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.