ಮುದಗಲ್: ಪಟ್ಟಣದಲ್ಲಿ ವಾಹನ ನಿಲುಗಡೆ ಸಮಸ್ಯೆ ನಿರಂತರವಾಗಿದೆ. ಪುರಸಭೆ, ಪೊಲೀಸ್ ಠಾಣೆ, ಮಸ್ಕಿ ರಸ್ತೆ, ಬಸ್ ನಿಲ್ದಾಣ ರಸ್ತೆ, ಖಾದ್ರಿ ಕಾಲೊನಿ ರಸ್ತೆ, ಹಳೆ ಬಜಾರ್ ರಸ್ತೆಯ ಎರಡೂ ಬದಿ ವಾಹನಗಳನ್ನು ನಿಲ್ಲಿಸುತ್ತಿರುವ ಕಾರಣ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ವಾಹನಗಳನ್ನು ಪಾದಚಾರಿ ಮಾರ್ಗದ ಮೇಲೆ ನಿಲ್ಲಿಸಿ, ತೊಂದರೆ ಉಂಟು ಮಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಸ್ಥರು ರಸ್ತೆಗೆ ಹೊಂದಿಕೊಂಡು ವ್ಯಾಪಾರ ಮಾಡುವುದರಿಂದ ಪಾದಾಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಪಾದಚಾರಿ ಮಾರ್ಗದಲ್ಲಿ ಪುರಸಭೆ ವಾಹನಗಳನ್ನೂ ನಿಲ್ಲಿಸಲಾಗುತ್ತಿದೆ.

ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಕ್ರಮ ವಹಿಸಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಜನ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಮಸ್ಕಿ ರಸ್ತೆ, ಹಳೆ ಸಂತೆ ಬಜಾರ್, ಗಣೇಶ ಕೆಫೆಗೆ ಹೋಗುವ ರಸ್ತೆ ಕಿರಿದಾದರೂ ಎರಡೂ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಆ ರಸ್ತೆಯಲ್ಲೂ ಸಂಚಾರ ದುಸ್ತರವಾಗಿದೆ. ಈ ರಸ್ತೆಯಲ್ಲಿ ಬೆಳಿಗ್ಗಿಯಿಂದ ಸಂಜೆವರೆಗೆ ವಾಹನ ನಿಲುಗಡೆ ನಿಷೇಧಿಸಿ ಪ್ರಾಯೋಗಿಕವಾಗಿ ಏಕಮುಖ ಸಂಚಾರ ರಸ್ತೆಯನ್ನಾಗಿಸಿದರೆ ಪರಿಹಾರ ದೊರೆಯಬಹುದು ಎಂಬುದು ಹಲವರ ಅಭಿಪ್ರಾಯ.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ನೋ ಪಾರ್ಕಿಂಗ್ ಫಲಕ ಅಳವಡಿಸಿಲ್ಲ. ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಪುರಸಭೆ ಮುಂದೆ ಬಂದಿಲ್ಲ.

ಹೈದರಾಬಾದ್–ಬೆಳಗಾವಿ ರಸ್ತೆ ಅಗಲೀಕರಣ ಮಾಡಿದರೂ ಪಾರ್ಕಿಂಗ್ ಸಮಸ್ಯೆ ಪರಿಹಾರವಾಗುತ್ತಿಲ್ಲ. ಮುಖ್ಯ ರಸ್ತೆ ನಿರ್ಮಾಣದ ವೇಳೆಯಲ್ಲಿ ರಸ್ತೆಗಿಂತ ಪಾದಚಾರಿ ಮಾರ್ಗವನ್ನೇ ಹೆಚ್ಚು ದೊಡ್ಡದಾಗಿ ನಿರ್ಮಿಸಲಾಗಿದೆ. ಆದ್ದರಿಂದ ಪಾದಚಾರಿ ಮಾರ್ಗದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಅಂಗಡಿ ಇಡುತ್ತಾರೆ. ವಾಹನಗಳನ್ನೂ ನಿಲ್ಲಿ ಸುವುದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದೆ.

ಪೊಲೀಸ್ ಠಾಣೆ ಮುಂದೆ ಮೆಡಿಕಲ್ ಶಾಪ್, ಹೋಟೆಲ್, ಹಣ್ಣಿನ ಅಂಗಡಿಗಳು ಇರುವುರಿಂದ ವಾಹನ ನಿಲುಗಡೆ ಸಮಸ್ಯೆಯಾಗುತ್ತದೆ. ಆದರೆ, ಇಲ್ಲಿ ಬೈಕ್, ಕಾರುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.

ಪ್ರಮುಖ ರಸ್ತೆಯಲ್ಲಿ ಪ್ರತಿದಿನ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ದಟ್ಟಣೆ ಸಮಸ್ಯೆ ಹೆಚ್ಚುತ್ತಲೇ ನಡೆದಿದೆ. ಮುಖ್ಯ ರಸ್ತೆಯ ಅರ್ಧ ಭಾಗವನ್ನು ವಾಹನಗಳೇ ಆಕ್ರಮಿಸುವುದರಿಂದ ಉಳಿದ ಅರ್ಧ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಭಾನುವಾರ ಹಾಗೂ ಸೋಮವಾರ ಸಂತೆ ದಿನ ವಾಹನಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇನ್ನಷ್ಟು ತೊಂದರೆ ಆಗುತ್ತದೆ. ಗ್ರಾಮೀಣ ಪ್ರದೇಶಕ್ಕೆ ಹೋಗುವ ಆಟೊ ರಿಕ್ಷಾಗಳನ್ನು ನಿಲ್ಲಿಸಲು ಸ್ಥಳಾವಕಾಶವೇ ಇಲ್ಲ. ಖಾದ್ರಿ ಕಾಲೊನಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿರುತ್ತಾರೆ. ಇದರಿಂದ ರಸ್ತೆ ಪಕ್ಕಕ್ಕೆ ಇರುವ ಅಂಗಡಿ ಮಾಲೀಕರು ಮತ್ತು ಆಟೊ ಚಾಲಕರ ಮಧ್ಯೆ ಆಗಾಗ ಘರ್ಷಣೆ ನಡೆಯುತ್ತಿರುತ್ತದೆ. ಪಟ್ಟಣದ ಜನ ದಟ್ಟಣೆ ಇರುವ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ಸಾಕಷ್ಟು ಸ್ಥಳ ಇಲ್ಲ. ಪಟ್ಟಣದ ಯಾವುದೇ ರಸ್ತೆಗೆ ಹೋದರೂ ಇಕ್ಕಟ್ಟಾದ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.