ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರದ್ಧಾ–ಭಕ್ತಿಯ ಮೊಹರಂ ಆಚರಣೆ

Published 30 ಜುಲೈ 2023, 11:11 IST
Last Updated 30 ಜುಲೈ 2023, 11:11 IST
ಅಕ್ಷರ ಗಾತ್ರ

ಶಕ್ತಿನಗರ: ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ಮೊಹರಂ ಕೊನೆಯ ದಿನವಾದ ಶನಿವಾರ ಅಲಾಯಿ ದೇವರುಗಳ ಮೆರವಣಿಗೆ ನಡೆಯಿತು.

ಅಲಾಯಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ನೈವೇದ್ಯ ಅರ್ಪಿಸಿದ ನಂತರ ವಿಶೇಷ ಅಲಂಕಾರ ಮಾಡಿ ಬಡಾವಣೆಗಳ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯುದ್ದಕ್ಕೂ ಭಕ್ತರು ಧೂಪ, ಊದುಬತ್ತಿ, ಹೂವು ಹಾಗೂ ಹಣ್ಣು-ತೆಂಗಿನ ಕಾಯಿಗಳನ್ನು ಕಾಣಿಕೆಯಾಗಿ ಅರ್ಪಿಸಿದರು.

ದಫನ್ ಕಾರ್ಯಕ್ರಮ ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಹಿಂದೂ–ಮುಸ್ಲಿಮರು ಅಲಾಯಿ ದೇವರುಗಳನ್ನು ಪ್ರತಿಷ್ಠಾಪಿಸಿದ ಅಶುರಖಾನಾಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಭಕ್ತರು ಸಿಹಿ–ಪಾನಕ, ಸಕ್ಕರೆ ನೈವೇದ್ಯ ತಂದು ಅಶುರಖಾನಾಗಳಲ್ಲಿ ಮುಜಾವರಗಳ ಮೂಲಕ ಪ್ರಾರ್ಥನೆ ಮಾಡಿ ಸಾರ್ವಜನಿಕರಿಗೆ ಹಂಚಿದರು. ಅನೇಕ ಮುಸ್ಲಿಮರು ಉಪವಾಸ ಕೈಗೊಂಡು ಸಂಜೆ ವ್ರತಾಚರಣೆ ಮುಕ್ತಾಯಗೊಳಿಸಿದರು.

ಡಿ.ಯದ್ಲಾಪುರ, ದೇವಸೂಗೂರು, ಯರಗುಂಟ ಹಾಗೂ ಹೆಗ್ಗಸನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳ ಯುವಕರು ಅಲಾಯಿ ಕುಣಿತ ಪ್ರದರ್ಶಿಸಿದರು. ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ದರ್ಬಾರ್ ಮುಂಭಾಗದಲ್ಲಿ ಪಂಜಾಗಳನ್ನು ದಫನ್ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT