ಬುಧವಾರ, ಅಕ್ಟೋಬರ್ 16, 2019
22 °C

ದಸರಾ ಹಬ್ಬದ ಸಡಗರ: ನಾಡದೇವಿಯ ಅದ್ಧೂರಿ ಮೆರವಣಿಗೆ

Published:
Updated:
Prajavani

ರಾಯಚೂರು: ನಗರ ಸೇರಿ ಜಿಲ್ಲೆಯಾದ್ಯಂತ ಮಂಗಳವಾರ ನವರಾತ್ರಿ ಉತ್ಸವದ ವಿಜಯದಶಮಿ ಅಂಗವಾಗಿ ದಸರಾ ಹಬ್ಬವನ್ನು ಸಡಗರದಿಂದ ಮಂಗಳವಾರ ಆಚರಣೆ ಮಾಡಲಾಯಿತು.

ಮೆರವಣಿಗೆ: ನಾಡಹಬ್ಬದ ದಸರಾ ಮಹೋತ್ಸವ ನಿಮಿತ್ತ ನಗರಸಭೆಯಿಂದ ಮಾಣಿಕಪ್ರಭು ದೇವಸ್ಥಾನದ ಬನ್ನಿಮಂಟದವರೆಗೆ ನಾಡದೇವಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಗೆ ಸ್ತಬ್ಧಚಿತ್ರ ಹಾಗೂ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಣೆ ಒದಗಿಸಿದವು.

ನಗರಸಭೆಯಿಂದ ಆರಂಭಗೊಂಡ ಮೆರವಣಿಗೆ ಏಕಮಿನಾರ್, ತೀನ್ ಕಂದಿಲ್, ಸರಾಫ್ ಬಜಾರ, ಸ್ವಾಮಿ ವಿವೇಕಾನಂದ ವೃತ್ತ, ಹನುಮಾನ್ ಟಾಕೀಜ್, ಎಲ್‌ವಿಡಿ ಕಾಲೇಜು ಮೂಲಕ ಬನ್ನಿ ಮಂಟಪದವರೆಗೆ ಸಾಗಿತು. ಮಹಿಳೆಯರ ಡೊಳ್ಳು ಕುಣಿತ, ಕೋಲಾಟ, ಗೊಂಬೆಗಳ ನೃತ್ಯ ಹಾಗೂ ವಿವಿಧ ಜಾನಪದ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ನಗರಸಭೆಯ ಸಿಬ್ಬಂದಿ ನೃತ್ಯಮಾಡಿ ಗಮನ ಸೆಳೆದರು.

ಮೆರವಣಿಗೆಯಲ್ಲಿ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಾ.ಶಿವರಾಜ ಪಾಟೀಲ, ಪೌರಾಯುಕ್ತ ರಮೇಶ ನಾಯಕ, ಸದಸ್ಯರಾದ ನಾಗರಾಜ, ಶರಣಬಸಪ್ಪ ಬಲ್ಲಟಗಿ, ಜನಪ್ರತಿನಿಧಿಗಳು, ಅಧಿಕಾರಿಗಳು, ನಗರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Post Comments (+)