ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಇದೇ ವಾರ ಪತನ

ಅನೇಕ ಯಶಸ್ವಿ ಪ್ರಯೋಗಗಳಿಗೆ ಸಾಕ್ಷಿ
Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ’ ತನ್ನ ಕಾರ್ಯಾಚರಣೆ ಅವಧಿ ಪೂರೈಸಿದ್ದು, ಮಾರ್ಚ್ 31 ಹಾಗೂ ಏಪ್ರಿಲ್ 4ರ ನಡುವಿನ ಅವಧಿಯಲ್ಲಿ ಭೂಮಿಗೆ ಅಭಿಮುಖವಾಗಿ ಪತನವಾಗಲಿದೆ. ಮಾರ್ಗಮಧ್ಯೆ ಭೂಮಿಯ ವಾತಾವರಣದಲ್ಲಿ ದಹನವಾಗಲಿದೆ.

ದತ್ತಾಂಶ ರವಾನೆಯನ್ನು ಈಗಾಗಲೇ ನಿಲ್ಲಿಸಿರುವ ‘ಟಿಯಾಂಗಾಂಗ್–1’, ಮಾರ್ಚ್ 16ರಂದು ಕೊನೆಯ ಹಂತ ಪ್ರವೇಶಿಸಿದೆ ಎಂದು ಚೀನಾ ಬಾಹ್ಯಾಕಾಶ ಎಂಜಿನಿಯರಿಂಗ್ ಕಚೇರಿ ತಿಳಿಸಿದೆ.

‘ಸ್ವರ್ಗದ ಅರಮನೆ’ ಎಂದು ಕರೆಯಲಾಗುವ ಟಿಯಾಂಗಾಂಗ್, ಭೂಮಿಯಿಂದ ಸುಮಾರು 216 ಕಿ.ಮೀ ದೂರದಲ್ಲಿ ಸುತ್ತು ಹಾಕುತ್ತಿದೆ. ಪ್ರಯೋಗಾಲಯವು ಪತನವಾಗಲು ಆರಂಭವಾಗುವ ಮೊದಲಿನ ಎರಡು ಗಂಟೆಗಳ ಮೊದಲಷ್ಟೇ ಅದು ಯಾವ ಸ್ಥಳದಲ್ಲಿ ಭೂ ವಾತಾವರಣ ಪ್ರವೇಶಿಸಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಭೂಮಿ ನಡುವಿನ ದೂರ ಸಂವೇದಿ ಪರೀಕ್ಷೆ ಹಾಗೂ ಬಾಹ್ಯಾಕಾಶ ಪರಿಸರ ಕುರಿತ ಸಂಶೋಧನೆಗಳನ್ನು ಇಲ್ಲಿ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT