ಹುಣಸಗಿ: ಇತಿಹಾಸ ಪ್ರಸಿದ್ಧ ನಾರಾಯಣಪುರದ ಛಾಯಾ ಭಗವತಿ ದೇವಿಯ 18 ತೀರ್ಥಗಳ ಪುಣ್ಯ ಸ್ನಾನ ಅಕ್ಷಯ ತೃತಿಯಾ ದಿನವಾದ ಸೋಮವಾರ ಬೆಳಗಿನ ಜಾವ ನಡೆಯಿತು.

ಛಾಯಾ ದೇವಿಗೆ ಆರತಿ ಮಾಡಿದ ನಂತರ ಬೆಳಿಗ್ಗೆ 5 ಗಂಟೆಯಿಂದಲೇ ಯಾತ್ರಾ ಮಹೋತ್ಸವವು ಕ್ಷೇತ್ರ ಪುರೋಹಿತರ ಮಾರ್ಗದರ್ಶನದಲ್ಲಿ ಆರಂಭವಾಯಿತು.

ರಾಜ್ಯದ ಬೆಂಗಳೂರು, ಉಡುಪಿ, ಬೆಳಗಾವಿ, ವಿಜಯಪುರ, ಕಲಬುರ್ಗಿ, ಬಾಗಲಕೋಟೆ ಸೇರಿದಂತೆ ಇತರ ಭಾಗಗಳಿಂದ ಭಕ್ತರು ಆಗಮಿಸಿ ತೀರ್ಥಸ್ನಾನ ಮಾಡಿ ಪುಳಕಿತರಾದರು.

‘ತೀರ್ಥ ಸ್ನಾನಕ್ಕೆ ತೆರಳುವ ಮಾರ್ಗ ಅತ್ಯಂತ ಕಠಿಣವಾಗಿದ್ದು, ಪ್ರತಿಯೊಬ್ಬರ ಭಕ್ತರಿಗೂ ಗಾಬರಿ ಜೊತೆಗೆ ಆಶ್ಚರ್ಯ ಉಂಟು ಮಾಡಿದೆ. ತೀರ್ಥ ಸ್ನಾನದ ಬಳಿಕ ಬರುವ ಮಾರ್ಗದಲ್ಲಿ ಸೂರ್ಯದ ಬಿಸಿಲಿನಿಂದ ಕಾಲು ಸುಡುವದು ಸಾಮಾನ್ಯವಾಗಿತ್ತು’ ಎಂದು ಕಲಬುರಗಿಯ ಗುಂಡಾಚಾರ್ಯ ಜೋಶಿ ತಿಳಿಸಿದರು.

ಸಂಪೂರ್ಣ ತೀರ್ಥ ಯಾತ್ರೆ ಮುಗಿಸಿಕೊಂಡು ಬರುವ ಮಾರ್ಗದ ಕೃಷ್ಣೆಯ ತಟದಲ್ಲಿ ಎಲ್ಲ ಭಕ್ತರಿಗೂ ನಾರಾಯಣಪುರದ ಗುರುರಾಜ ಭಜನಾ ಮಂಡಳಿಯಿಂದ ಉಪಾಹಾರದ ವ್ಯವಸ್ಥೆ ಮಾಡಿದ್ದರು.

11 ಗಂಟೆ ಹೊತ್ತಿಗೆ ಬಹುತೇಕ ಎಲ್ಲ ಭಕ್ತರ ತೀರ್ಥ ಸ್ನಾನ ಮುಗಿಯಿತು ಎಂದು ಪುರೋಹಿತರಾದ ಜಗನ್ನಾಥಾಚಾರ್ಯ ಜೋಶಿ ತಿಳಿಸಿದರು. ಬಳಿಕ ದೇವಿಗೆ ಬಾಗಿನ, ವಸಂತ ಪೂಜೆ, ತೀರ್ಥ ಪ್ರಸಾದ ಕಾರ್ಯಕ್ರಮಗಳು ನಡೆದವು. ಯಾತ್ರಾ ಮಹೋತ್ಸವದ ಅಂಗವಾಗಿ ನಾರಾಯಣಪುರದಿಂದ ಛಾಯಾ ಕ್ಷೇತ್ರಕ್ಕೆ ಅಟೋ ಖಾಸಗಿ ವಾಹನದ ವ್ಯವಸ್ಥೆ ಇತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-30-854053679

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.