ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಸೇತುವೆ

4
70 ವರ್ಷಗಳ ಹಿಂದೆ ನಿರ್ಮಿತ ಸೇತುವೆ ಶಿಥಿಲ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಸೇತುವೆ

Published:
Updated:
ಮಸ್ಕಿ ಸಮೀಪದ ಗುಡದೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲಿನ ತುಂಗಭದ್ರಾ ಎಡದಂಡೆ ಕಾಲುವೆಗೆ ನಿರ್ಮಿಸಿದ ಸೇತುವೆ ಶಿಥಿಲಗೊಂಡಿರುವುದು

ಮಸ್ಕಿ: ಶ್ರೀರಂಗಪಟ್ಟಣ ಬೀದರ ರಾಷ್ಟ್ರೀಯ ಹೆದ್ದಾರಿ 150 (ಎ) ನಡುವೆ ಬರುವ ತಾಲ್ಲೂಕಿನ ಗುಡದೂರು ಸಮೀಪದ ತುಂಗಭದ್ರಾ ಎಡದಂಡೆ ಮುಖ್ಯಾ ಕಾಲುವೆಗೆ 70 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆ ಶಿಥಿಲಗೊಂಡಿದೆ. ಇದರ ಪರಿಣಾಮ ಇಲ್ಲಿ ವಾಹನಗಳ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.

ಎರಡು ವರ್ಷಗಳ ಹಿಂದೆ ಮಸ್ಕಿ, ಸಿಂಧನೂರು ರಸ್ತೆ ಆಧುನೀಕರಣ ಸಂದರ್ಭದಲ್ಲಿ ಸೇತುವೆ ಪುನರ್ ನಿರ್ಮಿಸುವ ಕುರಿತು ಚಿಂತನೆ ನಡೆದಿತ್ತು. ಆದರೆ ಅದು ಕಾರ್ಯ ರೂಪಕ್ಕೆ ಬಾರದ ಕಾರಣ ಸೇತುವೆ ಯಥಾಸ್ಥಿತಿ ಉಳಿದುಕೊಂಡಿದೆ. ಸೇತುವೆ ಇನ್ನಷ್ಟು ಶಿಥಿಲಗೊಳ್ಳುವುದರ ಜೊತೆಗೆ ಅಪಘಾತಕ್ಕೂ ಎಡೆ ಮಾಡಿಕೊಟ್ಟಿದೆ.

ಈ ಹೆದ್ದಾರಿಯಲ್ಲಿ ನಿತ್ಯವೂ ಅಪಾರ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಬೆಂಗಳೂರು, ಬೀದರ್, ಹುಬ್ಬಳ್ಳಿ, ಬಳ್ಳಾರಿಗೆ ಇಲ್ಲಿಂದಲೇ ವಾಹನಗಳು ಹೋಗುತ್ತವೆ. ಇದೇ ಸೇತುವೆ ಮೂಲಕವೇ ಹಾದು ಹೋಗುತ್ತವೆ. ತಿಂಗಳಲ್ಲಿ 10ಕ್ಕೂ ಹೆಚ್ಚು ಅಪಘಾತಗಳು ಸೇತುವೆ ಬಳಿ ಸಂಭವಿಸುತ್ತವೆ. ಟ್ರ್ಯಾಕ್ಟರ್, ಲಾರಿ, ಅಟೋರಿಕ್ಷಾಗಳು ಈ ಸೇತುವೆ ಬಳಿ ಅಪಘಾತಕ್ಕೀಡಾಗುತ್ತವೆ. ಮಸ್ಕಿ ಹಾಗೂ ಬಳಗಾನೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಕಿರಿದಾದ ಸೇತುವೆಯನ್ನು ಪುನರ್ ನಿರ್ಮಿಸುವಂತೆ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಕೋರಿದ್ದೇವೆ. ಆದರೆ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಕ್ಕಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.  ಸೇತುವೆ ಪುನರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಅಪಘಾತ ಘಟಿಸುವುದನ್ನು ತಡೆಯಬೇಕು ಎಂದು ವಾಹನ ಸವಾರ ರಾಜುಗೌಡ ತಿಳಿಸಿದರು.  

ರಾಷ್ಟ್ರೀಯ ಹೆದ್ದಾರಿ 150 (ಎ) ರಸ್ತೆ ಅಭಿವೃದ್ಧಿ ಹಾಗೂ ಸೇತುವೆಗಳ ಪುನರ್ ನಿರ್ಮಾಣಕ್ಕೆ ₹ 260 ಕೋಟಿ ವೆಚ್ಚದ ಕಾಮಗಾರಿಗೆ ಒಂದೆರಡು ತಿಂಗಳಲ್ಲಿ ಟೆಂಡರ್ ಕರೆಯಲಾಗುಗುವುದು.
- ವಿಜಯಕುಮಾರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !