ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಶ್ರಮಿಸಿ: ನ್ಯಾ. ನಾಡಗೌಡ

Last Updated 25 ನವೆಂಬರ್ 2020, 14:21 IST
ಅಕ್ಷರ ಗಾತ್ರ

ರಾಯಚೂರು: ಇಂದಿನ ಸಮಾಜದಲ್ಲಿ ಪರಿಸರವು ವಿನಾಶವಾಗುತ್ತಿರುವುದರಿಂದ ಸಮಾಜದ ಸ್ವಾಸ್ಯ್ಥ ಕೂಡ ಮಾಲಿನ್ಯವಾಗತ್ತದೆ. ಹೆಚ್ಚು ಗಿಡ ಮರಗಳನ್ನು ಬೆಳಿಸುವದರಿಂದ ಶುದ್ಧವಾದ ಗಾಳಿ ಸಿಗುವ ಮೂಲಕ ಉತ್ತಮ ಆರೋಗ್ಯ ಲಭಿಸುತ್ತಿದೆ, ಈ ದಿಸೆಯಲ್ಲಿ ಪ್ರತಿಯೊಬ್ಬರೂ ಮರ ಬೆಳೆಸಿ ಉಳಿಸುವ ಸಾಮಾಜಿಕ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ.ಎಂ.ಸಿ.ನಾಡಗೌಡ ತಿಳಿಸಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾರಾಗೃಹ ಮತ್ತು ಸುದಾರಣಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಆಚರಣೆ ಅಂಗವಾಗಿ ಪರಿಸರ ರಕ್ಷಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಆರ್.ಅಂದಾನಿ, ಅರಣ್ಯ ಇಲಾಖೆಯ ಉಪ ಸಂರಕ್ಷಣೆ ಅಧಿಕಾರಿ ನಾರಾಯಣಪ್ಪ, ಕಾರಾಗೃಹ ಇಲಾಖೆಯ ಜೈಲರ್ ಆದ ಅಬ್ದುಲ ಶಕೂರ್, ಭಾಗ್ಯಶ್ರೀ, ಅರಣ್ಯ ಇಲಾಖೆಯ ಅಧಿಕಾರಿಗಳಾದ ರಾಜೇಶ್, ಉಪವಲಯ ಅಧಿಕಾರಿ ರಾಜಶೇಖರ್, ಅರಣ್ಯಾಧಿಕಾರಿ ಸುಗಣ್ಣ ಮೀಟಿ, ಕಾರಾಗೃಹ ಇಲಾಖೆ ಬೋಧಕ ತಾಯಪ್ಪ, ಸಹಾಯಕ ಜೈಲರ್‌ ಶ್ಯಾಮ್ ಬಿದರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT