ದಂತಶಾಸ್ತ್ರ ವಿಧಿವಿಜ್ಞಾನ: 25 ರಂದು ರಾಷ್ಟ್ರೀಯ ಕಾರ್ಯಾಗಾರ

7

ದಂತಶಾಸ್ತ್ರ ವಿಧಿವಿಜ್ಞಾನ: 25 ರಂದು ರಾಷ್ಟ್ರೀಯ ಕಾರ್ಯಾಗಾರ

Published:
Updated:

ರಾಯಚೂರು: ನವೋದಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವ ಅಂಗವಾಗಿ ನವೋದಯ ದಂತವೈದ್ಯ ಮಹಾವಿದ್ಯಾಲಯವು ಜನವರಿ 25 ರಂದು ದಂತಶಾಸ್ತ್ರ ವಿಧಿವಿಜ್ಞಾನ ಕುರಿತು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಏರ್ಪಡಿಸಿದೆ.

‘ರೇಡಿಯೊಲಾಜಿಕಲ್‌ ಮತ್ತು ಹಿಸ್ಟೊಲಾಜಿಕಲ್‌ ಮೂಲಕ ಹಲ್ಲುಗಳ ಆಯುಷ್ಯ ನಿರ್ಧರಿಸುವ ವಿಧಾನಗಳು’ ಕುರಿತು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡನೆ ಮಾಡಲಿದ್ದಾರೆ. ಧಾರವಾಡದ ಎಸ್‌ಡಿಎಂ ದಂತವೈದ್ಯ ಮಹಾವಿದ್ಯಾಲಯದ ದಂತಶಾಸ್ತ್ರ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಶಿತ್‌ ಬಿ. ಆಚಾರ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.

ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌.ಆರ್‌.ರೆಡ್ಡಿ ಮುಖ್ಯಅತಿಥಿ, ಸಂಸ್ಥೆಯ ಕುಲಸಚಿವ ಡಾ.ಟಿ. ಶ್ರೀನಿವಾಸ್‌ ಮತ್ತು ಕಲಬುರ್ಗಿಯ ಇಎಸ್‌ಐಸಿ ವಿಧಿವಿಜ್ಞಾನ ಔಷಧ ವಿಭಾಗದ ಮುಖ್ಯಸ್ಥ ಡಾ.ರಾಜೇಶ ಸಂಗ್ರಾಮ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರು. ನವೋದಯ ದಂತವೈದ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಹುಣಸಗಿ ಅಧ್ಯಕ್ಷತೆ ವಹಿಸುವರು.

ಬೆಳಿಗ್ಗೆ 8 ಗಂಟೆಗೆ ಪ್ರತಿನಿಧಿಗಳ ನೋಂದಣಿ ಹಾಗೂ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಕಾರ್ಯಾಗಾರದಲ್ಲಿ ಓರಲ್‌ ಪ್ಯಾಥೊಲಜಿ ವಿಭಾಗದ ಮುಖ್ಯಸ್ಥೆ ಡಾ.ವಾಣಿಶ್ರೀ ಎಂ. ಅವರು ಸಂಘಟನಾ ಅಧ್ಯಕ್ಷರಾಗಿ ಮತ್ತು ಓರಲ್‌ ಮೆಡಿಷಿನ್‌ ಆ್ಯಂಡ್‌ ರೆಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್‌ ಬಿ. ಪಾಟೀಲ ಅವರು ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವರು ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !