ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ನವರಾತ್ರಿ ಉತ್ಸವ: ಅ.3ರಿಂದ ವಿವಿಧ ಕಾರ್ಯಕ್ರಮ

Published : 1 ಅಕ್ಟೋಬರ್ 2024, 14:33 IST
Last Updated : 1 ಅಕ್ಟೋಬರ್ 2024, 14:33 IST
ಫಾಲೋ ಮಾಡಿ
Comments

ರಾಯಚೂರು: ನಗರದ  ಬ್ರೇಸ್ತವಾರಪೇಟೆಯಲ್ಲಿನ ಉಪ್ಪರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12 ವರೆಗೆ 53 ನೇ ನವರಾತ್ರಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಮದ್ದಿಕೇರಿ ಈರಣ್ಣ ತಿಳಿಸಿದರು.

ದಸರಾ ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಿತ್ಯ ವಾಹನೋತ್ಸವ, ರಥೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ಉಚ್ಛಾಯ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಅಕ್ಟೋಬರ್ 3ರಂದು ಸೂರ್ಯ ವಾಹನ, 4ಕ್ಕೆ ಆದಿಶೇಷ ವಾಹನ, 5ಕ್ಕೆ ಆಂಜನೇಯ ವಾಹನ, 6ರಂದು ಕಾಮಧೇನು ಕಲ್ಪವೃಕ್ಷ ವಾಹನ ಮತ್ತು ಮಹಿಳೆಯರಿಂದ ಕಳಸಗಳ ಸಂಗಡ ದೀರ್ಘದಂಡ ನಮಸ್ಕಾರ ಸೇವೆ,  7ರಂದು ಚಂದ್ರವಾಹನ, 8 ಕ್ಕೆ ಗರುಡ ವಾಹನ, 9ಕ್ಕೆ ಗಜವಾಹನ, 10ರಂದು ಅಶ್ವ ಹಾಗೂ ಉಚ್ಛಾಯ ಮತ್ತು 11ಕ್ಕೆ ಸಿಂಹವಾಹನೋತ್ಸ ಮತ್ತು ರಥೋತ್ಸವ ಜರುಗಲಿದ್ದು, 12ರಂದು ವಿಜಯದಶಮಿ ನಿಮಿತ್ತ ಶ್ರೀನಿವಾಸ ಕಲ್ಯಾಣೋತ್ಸ ನಡೆಯಲಿವೆ ಎಂದು ತಿಳಿಸಿದರು. 

ದೇವಸ್ಥಾನದ ಅರ್ಚಕ ಕಾಂತಾಚಾರ್‌, ಸಮಿತಿ ಪದಾಧಿಕಾರಿಗಳಾದ ಗಟ್ಟಿ ವಂಕಟೇಶ, ಕೆ.ಐನಾಪುರ ಆಂಜನೇಯ್ಯ, ಯು.ವೆಂಕೋಬ, ಆದೋನಿ ಆದಿರಾಜ, ಎನ್‌.ಬಸವರಾಜ, ಎಚ್‌.ಆಲ್ವಿ ಶ್ರೀನಿವಾಸ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT