ಕವಿತಾಳ: ಸಮೀಪದ ಹಿರೇಹಣಿಗಿ ಗ್ರಾಮದ ಸರ್ಕಾರಿ ಶಾಲೆಯ ಎದುರು ಎರಡು ವಿಫಲ ಕೊಳವೆಬಾವಿಗಳನ್ನು ಹಾಗೆಯೇ ಬಿಟ್ಟಿದ್ದು ಮಕ್ಕಳ ಸುರಕ್ಷತೆಯ ಬಗ್ಗೆ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಗ್ರಾಮಕ್ಕೆ ನೀರು ಪೂರೈಸುವ ಉದ್ದೇಶದಿಂದ ವರ್ಷದ ಹಿಂದೆ ಎರಡು ಕೊಳವೆಬಾವಿ ಕೊರೆಯಿಸಲಾಗಿದ್ದು ನೀರು ಬಾರದ ಕಾರಣ ಕೇಸಿಂಗ್ ಪೈಪ್ ಸಹಿತ ಅವುಗಳನ್ನು ಹಾಗೆಯೇ ಬಿಡಲಾಗಿದೆ. ಶಾಲಾ ಮಕ್ಕಳು ಅದರಲ್ಲಿ ಇಣುಕಿ ನೋಡುವುದು, ಅದರ ಸುತ್ತ ಮುತ್ತ ಆಟವಾಡುವುದು ಮಾಡುತ್ತಾರೆ. ಮಕ್ಕಳು ಆಯ ತಪ್ಪಿ ಅದರಲ್ಲಿ ಬೀಳುವ ಸಾಧ್ಯತೆ ಇರುತ್ತದೆ, ಈ ಬಗ್ಗೆ ಮಾಹಿತಿ ನೀಡಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೊಳವೆಬಾವಿ ಮುಚ್ಚಿಸಲು ಕ್ರಮ ಕೈಗೊಂಡಿಲ್ಲʼ ಎಂದು ಸ್ಥಳೀಯರು ಆರೋಪಿಸಿದರು.

ಶಾಲಾ ದಿನಗಳಲ್ಲಿ ಶಿಕ್ಷಕರು ಕೊಳವೆಬಾವಿಯ ಮೇಲೆ ಕಲ್ಲು ಬಂಡೆ ಹಾಕಿ ಮುಚ್ಚಿರುತ್ತಾರೆ. ಭಾನುವಾರ ಮತ್ತು ಶಾಲೆಗೆ ರಜೆ ಇದ್ದಾಗ ಮಕ್ಕಳು ಅದನ್ನು ತೆರೆದು ಹಾಗೆಯೇ ಬಿಡುತ್ತಾರೆ. ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರು ಗಮನಿಸಿದಲ್ಲಿ ಮಕ್ಕಳನ್ನು ಗದರಿ ಮನೆಗೆ ಕಳುಹಿಸುತ್ತಾರೆ. ಗಮನಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಪಾಯ ಉಂಟಾಗುವ ಮೊದಲು ಕೊಳವೆಬಾವಿ ಮುಚ್ಚಿಸಲು ಕ್ರಮ ಕೈಗೊಳ್ಳಬೇಕುʼ ಎಂದು ಗ್ರಾಮದ ಭೀರಪ್ಪ ಮತ್ತು ಮಲ್ಲಯ್ಯ ಉದ್ಭಾಳ ಒತ್ತಾಯಿಸಿದರು.

‘ಸಾರ್ವಜನಿಕ ಸ್ಥಳ ಅದರಲ್ಲೂ ಶಾಲಾ ಮುಂಭಾಗದಲ್ಲಿಯೇ ಕೊಳವೆಬಾವಿ ಮುಚ್ಚಿಸದಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ’ ಎಂದು ಲಿಂಗಪ್ಪ ತೆಲಗರ್ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಕೆಜಿ ಯುಕೆಜಿ 28 ಮಕ್ಕಳು ಸೇರಿದಂತೆ 230 ಮಕ್ಕಳು ಅಭ್ಯಾಸ ಮಾಡುತ್ತಾರೆ. ಮಕ್ಕಳ ಸುರಕ್ಷತೆಗಾಗಿ ಕೊಳವೆಬಾವಿಯನ್ನು ಶಾಶ್ವತವಾಗಿ ಮುಚ್ಚಿಸಬೇಕು.
– ಅಮರೇಶ, ಮುಖ್ಯಶಿಕ್ಷಕ ಹಿರೇಹಣಿಗಿ ಸರ್ಕಾರಿ ಶಾಲೆ

ತಾತ್ಕಾಲಿಕವಾಗಿ ಕೊಳವೆಬಾವಿ ಮುಚ್ಚಿಸಲು ಕ್ರಮ ವಹಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಶಶಿಧರ ಸ್ವಾಮಿ, ಸಿರವಾರ ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.