ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ₹ 5.06 ಲಕ್ಷ ನಿವ್ವಳ ಲಾಭ

Last Updated 13 ನವೆಂಬರ್ 2021, 10:46 IST
ಅಕ್ಷರ ಗಾತ್ರ

ತುರ್ವಿಹಾಳ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿಯಮಿತ ಸಂಘಕ್ಕೆ 2020-21 ಸಾಲಿನಲ್ಲಿ ₹ 5.06 ಲಕ್ಷ ನಿವ್ವಳ ಲಾಭವಾಗಿದ್ದು, ಸದಸ್ಯರಿಗೆ ಲಾಭಾಂಶವನ್ನು ವಿತರಣೆ ಮಾಡಲಾಗುವುದು‘ ಎಂದು ಸಂಘದ ಅಧ್ಯಕ್ಷ ಮಂಟೆಪ್ಪ ಎಲೆಕೂಡ್ಗಿ ಹೇಳಿದರು.

ಶುಕ್ರವಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಸಂಘದ ಆಡಳಿತ ಮಂಡಳಿಯ ಮೇಲೆ ಜನರು ಹಾಗೂ ಸದಸ್ಯರು ವಿಸ್ವಾಸವಿಟ್ಟು ಠೇವಣಿ ಇಟ್ಟಿದ್ದಾರೆ. ಸಾರ್ವಜನಿಕರು ಸಾಲ ಪಡೆದು ಸ್ವಉದ್ಯೋಗ ಮಾಡಿ ಆರ್ಥಿಕ ಪ್ರಗತಿ ಹೊಂದಿದ್ದಾರೆ. ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನದಿಂದ ಕೊಟ್ಟ ಸಾಲವು ನಿಗದಿತ ಅವಧಿಯಲ್ಲಿ ಮರುಪಾವತಿಯಾಗಿದೆ‘ ಎಂದರು.

ಸಿಂಧನೂರಿನ ಸಹಕಾರ ಮಹಾ ಮಂಡಳಿ ಮುಖ್ಯ ಕಾರ್ಯನಿರ್ವಾಹಕಿ ಅನ್ನಪೂರ್ಣ ಮಾತನಾಡಿ, ‘ಸಹಕಾರಿ ಸಂಘಗಳ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪ್ರಗತಿ ಖಚಿತ‘ ಎಂದರು.

ಮುಖ್ಯ ಕಾರ್ಯನಿರ್ವಾಹಕ ವೀರೇಶ ನಾಯ್ಕರ್ ಸಂಘದ ವಾರ್ಷಿಕ ಪ್ರಗತಿವರದಿ ವಾಚನ ಮಾಡಿದರು.

ಮಲ್ಲನಗೌಡ ದೇವರಮನಿ, ಚಿನ್ನಪ್ಪ ಕಾರಟಿಗಿ, ರುದ್ರಸ್ವಾಮಿ ಕೆಂಡದಮಠ, ಶಿವನಗೌಡ ರಾಘಲಪರ್ವಿ, ಶ್ಯಾಮೀದ್ ಸಾಬ್, ಉಮರ್ ಸಾಬ್, ಮೌಲಪ್ಪಯ್ಯ, ಪರ್ವತರೆಡ್ಡಿ, ಕರಿಲಿಂಗಪ್ಪ, ಹುಲಿಗೆಮ್ಮ ದೇವರಮನಿ, ರೇಣುಕಮ್ಮ ಹತ್ತಿಗುಡ್ಡ, ಲಕ್ಷ್ಮೀ ಭಂಗಿ, ಮಹಾದೇವಪ್ಪ ನವಲಳ್ಳಿ, ನಾಗರಾಜ ಶೆಟ್ಟಿ, ನಾಗಲಿಂಗಪ್ಪ, ಚಾಂದ್ ಪಾಷಾ ಇದ್ದರು.

ಶಿವಕುಮಾರ ಭೇರ್ಗಿ ನಿರುಪಿಸಿದರು ಯಮನೂರಪ್ಪ ಹುಲ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT