ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದುರ್ಗ: ಶಿಥಿಲಗೊಂಡ ಕೋಣೆಗಳಲ್ಲೇ ಮಕ್ಕಳಿಗೆ ಪಾಠ

Last Updated 9 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಶಾವಂತಗೇರಾ (ದೇವದುರ್ಗ): ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಮಕ್ಕಳು ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ.

ಸರ್ಕಾರಿ ಶಾಲೆಯ ಕಟ್ಟಡಗಳು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದಿವೆ. ಪ್ರಸ್ತುತ ಶಿಥಿಲ, ಬಣ್ಣ ಮಾಸಿರುವ ಗೋಡೆ, ತೆಗ್ಗು ಗುಂಡಿ ನೆಲ, ಬಳಪ ಮೂಡದ ಬೋರ್ಡುಗಳು ದೂರದಿಂದ ನೋಡಿದರೆ ಭೂತ ಬಂಗಲೆಯಂತೆ ಕಾಣುತ್ತಿವೆ. ಶಾಲೆಯ ಮೂರು ಕೊಠಡಿಗಳು ಸಂಪೂರ್ಣ ಬಿರುಕು ಬಿಟ್ಟಿದ್ದು ಯಾವ ಸಮಯದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿವೆ.

ಗ್ರಾಮದಲ್ಲಿ ಹೆಚ್ಚುವರಿ ಕೊಠಡಿಗಳಿದ್ದರೂ ಮಕ್ಕಳಿಗೆ ಅನುಗುಣವಾಗಿಲ್ಲ. 186 ಮಕ್ಕಳಿಗೆ ಕೇವಲ ನಾಲ್ಕು ಹೆಚ್ಚುವರಿ ಕಟ್ಟಡಗಳಿವೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಡೆಸ್ಕ್, ಫ್ರೀಡಂ ಸಾಮಾಗ್ರಿಗಳು ಕಂಪ್ಯೂಟರ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಈಚೆಗೆ ಸುರಿದ ಮಳೆಯಿಂದಾಗಿ ಕಟ್ಟಡಗಳೆಲ್ಲವೂ ನೀರಿನಲ್ಲಿ ನೆನೆದು ಹೋಗಿವೆ. ತಾತ್ಕಾಲಿಕವಾಗಿ ಲಭ್ಯವಿರುವ ಕೊಠಡಿಗಳಲ್ಲಿ ತರಗತಿಗಳು ನಡೆಸಿಕೊಂಡು ಹೋಗಬೇಕಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ಕೂಡಲೇ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ಅಭಿವೃದ್ಧಿಪಡಿಸಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂಬುದು ಪೋಷಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT