ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಚನಾ, ಶ್ರೀಹರಿ ರಾಷ್ಟ್ರೀಯ ದಾಖಲೆ

ರಾಜ್ಯ ಜೂನಿಯರ್‌, ಸಬ್‌ ಜೂನಿಯರ್‌ ಈಜು: ಎಂಟು ಕೂಟ ದಾಖಲೆ
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ಗುರುವಾರ ಮಿಂಚಿನ ಸಂಚಲನ ಮೂಡಿಸಿದ ರಚನಾ ಎಸ್‌.ಆರ್. ರಾವ್‌ ಮತ್ತು ಶ್ರೀಹರಿ ನಟರಾಜ್‌ ಅವರು ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

ರಾಜ್ಯ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನ ಬಾಲಕಿಯರ 100 ಮೀ ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಮಂಗಳೂರಿನ ಮಂಗಳಾ ಈಜು ಕ್ಲಬ್‌ನ ರಚನಾ ಅವರು 1 ನಿಮಿಷ 15.95 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಉತ್ತರ ಪ್ರದೇಶದ ಆಲಿಯಾ ಸಿಂಗ್‌ ಅವರು 2016 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕೂಟದಲ್ಲಿ 1:17.76 ಸೆಕೆಂಡುಗಳಲ್ಲಿ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ರಚನಾ ಮುರಿದರು. ಈ ವಿಭಾಗದಲ್ಲಿ ಕೂಟ ದಾಖಲೆ ಪಿಎಂಎಸ್‌ಸಿ ಕ್ಲಬ್‌ನ ಸಲೋನಿದಲಾಲ್‌ (1:19.58 ಸೆ.) ಹೆಸರಿನಲ್ಲಿತ್ತು.

ಬೆಂಗಳೂರು ಸ್ವಿಮ್ಮಿಂಗ್‌ ರಿಸರ್ಚ್‌ ಸೆಂಟರ್‌ನ (ಬಿಎಸ್‌ಆರ್‌ಸಿ) ಶ್ರೀಹರಿ ಅವರು ಬಾಲಕರ ಗುಂಪು–1ರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 57.04 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆ ಮತ್ತು ರಾಷ್ಟ್ರೀಯ ದಾಖಲೆ ತಮ್ಮದಾಗಿಸಿಕೊಂಡರು.

ಕೂಟದ ಮೊದಲ ದಿನ ಒಟ್ಟು ಎಂಟು ಕೂಟ ದಾಖಲೆಗಳು ನಿರ್ಮಾಣವಾದವು. ಜೂನ್‌ 3ರ ವರೆಗೆ ನಡೆಯಲಿರುವ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದ ವಿವಿಧ ಕ್ಲಬ್‌ಗಳ 700 ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.

ಮೊದಲ ದಿನದ ಫಲಿತಾಂಶದ ವಿವರ: ಬಾಲಕರ ವಿಭಾಗ: (ಗುಂಪು–1) 1500 ಮೀ. ಫ್ರೀಸ್ಟೈಲ್‌: ಮೋಹಿತ್ ವೆಂಕಟೇಶ್ (ಬಸವನಗುಡಿ ಅಕ್ವಟಿಕ್‌ ಸೆಂಟರ್‌)–1, ಯತೀಶ್ ಎಸ್.ಗೌಡ (ಬಿಎಸಿ)–2, ಸೈಫ್ ಚಂದನ್ ಅಲಿ (ಬಿಎಸ್‌ಆರ್‌ಸಿ)–3 ಕಾಲ: 16:43.48 ಸೆ. (ಹೊಸ ಕೂಟ ದಾಖಲೆ; ಹಳೆಯದು 16:48.06 ಸೆ.)

100 ಮೀ. ಬ್ರೆಸ್ಟ್ ಸ್ಟ್ರೋಕ್: ಪಿ.ಕುಶಾಲ್‌ (ಬಿಎಸ್‌ಆರ್‌ಸಿ)–1, ಅನೇಶ್‌ ರಾಯ್‌ (ಬಿಎಸ್‌ಆರ್‌ಸಿ)–2, ಲಿತೀಶ್‌ ಎಸ್‌.ಗೌಡ (ಬಿಎಸಿ)–3. ಕಾಲ: 1:10.40 ಸೆ.

200 ಮೀ.ಬಟರ್‌ಫ್ಲೈ: ನಿಷ್‌ ಜಾರ್ಜ್‌ ಮ್ಯಾಥ್ಯೂ (ಬಿಎಸ್‌ಆರ್‌ಸಿ)–1, ಸಿ.ಜೆ.ಸಂಜಯ್‌ (ಡಾಲ್ಫಿನ್ಸ್)–2, ಪ್ರಸಿದ್ಧ ಕೃಷ್ಣ (ಬಿಎಸ್‌ಆರ್‌ಸಿ)–3. ಕಾಲ: 2:05.59 ಸೆ. (ಹೊಸ ಕೂಟ ದಾಖಲೆ; ಹಳೆಯದು 2:00.50 ಸೆ.)

100 ಮೀ. ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಬಿಎಸ್‌ಆರ್‌ಸಿ)–1, ಆರ್‌.ಭವೇಶ್ (ಬಿಎಸ್‌ಆರ್‌ಸಿ)–2, ಶಿವಾನ್ಶ್‌ ಸಿಂಗ್ (ಬಿಎಸಿ)–3. ಕಾಲ: 57.04 ಸೆ. (ನೂತನ ರಾಷ್ಟ್ರೀಯ ದಾಖಲೆ: ಹಳೆಯದು 57.33 ಸೆ.)

100 ಮೀ. ಬ್ಯಾಕ್‌ಸ್ಟ್ರೋಕ್: ಪೂರ್ವಾಂಕ್‌ ರಮೇಶ್‌ (ಬಿಎಸ್‌ಆರ್‌ಸಿ)–1, ಧ್ಯಾನ್‌ ಬಾಲಕೃಷ್ಣ (ಬಿಎಸಿ)–2, ಅಕ್ಷಯ ಶೇಟ್‌ (ಬಿಎಸ್‌ಆರ್‌ಸಿ)–3. ಕಾಲ: 1:05.46 ಸೆ.

4X100 ಮೀ. ಫ್ರೀಸ್ಟೈಲ್‌: ಬಿಎಸ್‌ಆರ್‌ಸಿ ‘ಎ’–1, ಬಿಎಸಿ‘ಎ’–2, ಬಿಎಸ್‌ಆರ್‌ಸಿ ‘ಬಿ’–3. ಕಾಲ: 3:41.30 ಸೆ.

ಗುಂಪು–2: 800 ಮೀ. ಫ್ರೀಸ್ಟೈಲ್: ಕಪಿಲ್‌ ಡಿ.ಶೆಟ್ಟಿ (ಡಾಲ್ಫಿನ್ಸ್‌ ಅಕ್ವೆಟಿಕ್ಸ್‌)–1, ಧ್ಯಾನ್‌ ಬಾಲಕೃಷ್ಣ (ಬಿಎಸಿ)–2, ಅನೀಶ್ ಎಸ್.ಗೌಡ (ಪೂಜಾ ಅಕ್ವಟಿಕ್ಸ್‌)–3. ಕಾಲ: 8:55.26 ಸೆ.

100 ಮೀ. ಬ್ರೆಸ್ಟ್ ಸ್ಟ್ರೋಕ್: ಆರ್‌.ಹರ್ಷ (ಬಿಎಸ್‌ಆರ್‌ಸಿ)–1, ಪ್ರಗುನ್‌ ದೇವ್‌ (ಡಾಲ್ಫಿನ್ಸ್)–2, ಕಲ್ಪ್‌ ಎಸ್.ಬೊಹ್ರಾ (ಪೂಜಾ ಅಕ್ವಟಿಕ್)–3. ಕಾಲ: 1:11.69 ಸೆ.

200 ಮೀ. ಬಟರ್‌ಫ್ಲೈ: ಉತ್ಕರ್ಷ್ ಎಸ್‌.ಪಾಟೀಲ್ (ಬಿಎಸಿ)–1, ಆರ್‌.ಸಂಭವ್ (ಬಿಎಸ್‌ಆರ್‌ಸಿ)–2, ಸಮರ್ಥ್‌ ಸುಬ್ರಮಣ್ಯ ರಾವ್ (ಬಿಎಸ್‌ಆರ್‌ಸಿ)–3. ಕಾಲ: 2:21.04 ಸೆ.

4X100 ಮೀ.ಮೆಡ್ಲೆ: ಬಿಎಸ್‌ಆರ್‌ಸಿ ‘ಎ’–1, ಬಿಎಸಿ ‘ಎ’–2, ಪೂಜಾ ಅಕ್ವಟಿಕ್‌ ಸೆಂಟರ್–3. ಕಾಲ: 4:21.48 ಸೆ.

ಗುಂಪು–3: 200 ಮೀ. ಫ್ರೀಸ್ಟೈಲ್: ಎಸ್‌.ವಿಶ್ವನಾಥ್‌ (ಪೂಜಾ ಅಕ್ವಟಿಕ್)–1, ಅಮೀಷ್‌ ಪ್ರಸಾದ್‌ (ಬಿಎಸಿ)–2, ಎಸ್‌.ಧನುಷ್ (ವಿಜಯನಗರ ಅಕ್ವಟಿಕ್)–3. ಕಾಲ: 2:18.89 ಸೆ.

100 ಮೀ. ಬಟರ್‌ಫ್ಲೈ: ಎಸ್‌.ಧನುಷ್ (ವಿಜಯನಗರ ಅಕ್ವಟಿಕ್)–1, ಕಾರ್ತಿಕೇಯನ್‌ ನಾಯರ್ (ಡಾಲ್ಫಿನ್ಸ್)–2, ನೀಲೇಶ್‌ ದಾಸ್ (ಬಿಎಸ್‌ಆರ್‌ಸಿ)–3. ಕಾಲ: 1:09.53 ಸೆ.

4X50 ಮೀ ರಿಲೇ: ಬಿಎಸಿ ‘ಎ’–1, ಡಾಲ್ಫಿನ್ಸ್‌ ಅಕ್ವಟಿಕ್‌–2, ಪೂಜಾ ಅಕ್ವಟಿಕ್‌ ಸೆಂಟರ್–3

ಗುಂಪು–4:100 ಮೀ. ಫ್ರೀಸ್ಟೈಲ್: ಆರ್‌.ನವನೀತ್ ಗೌಡ (ಡಾಲ್ಫಿನ್ಸ್)–1, ರೇಣುಕಾಚಾರ್ಯ ಎಚ್‌ (ಡಾಲ್ಫಿನ್ಸ್‌)–2, ಪಿ.ವಿ.ಮೋನಿಷ್ (ಪೂಜಾ ಅಕ್ವಟಿಕ್)–3. ಕಾಲ: 1:08.91 ಸೆ.

50 ಮೀ. ಬ್ಯಾಕ್‌ಸ್ಟೋಕ್: ತನಯ್‌ ಸುರೇಶ್‌ (ವಿಜಯನಗರ ಅಕ್ವಟಿಕ್)–1, ರೇಣುಕಾಚಾರ್ಯ ಎಚ್ (ಡಾಲ್ಫಿನ್ಸ್)–2, ಯಶ್‌ ಕಾರ್ತಿಕ್ (ಬಿಎಸಿ)–3. ಕಾಲ: 36.93 ಸೆ.

ಬಾಲಕಿಯರ ವಿಭಾಗ: (ಗುಂಪು–1)1,500 ಮೀ. ಫ್ರೀಸ್ಟೈಲ್: ಖುಷಿ ದಿನೇಶ್ (ಬಿಎಸಿ)–1, ಎಸ್‌.ಎಸ್‌.ನಂದಿನಿ (ಬಿಎಸಿ)–2, ಅಭಿಜ್ಞಾ ಆನಂದ್‌ (ಪೂಜಾ ಅಕ್ವಟಿಕ್ ಸೆಂಟರ್)–3. ಕಾಲ: 18:18.59 ಸೆ.

100 ಮೀ. ಬ್ರೆಸ್ಟ್ ಸ್ಟ್ರೋಕ್: ಸಲೋನಿ ದಲಾಲ್‌ (ಬಿಎಸಿ)–1, ಹರ್ಷಿತಾ ಜಯರಾಂ (ಬಿಎಸ್‌ಆರ್‌ಸಿ)–2, ವಿ.ಶ್ವೇತಾ (ಎನ್‌ಎಂಎಸ್‌ಎ)–3. ಕಾಲ: 1:17.89 ಸೆ.

200 ಮೀ. ಬಟರ್‌ಫ್ಲೈ: ಜಿ.ಸಾಚಿ (ಬಿಎಸಿ)–1, ಸ್ಮೃತಿ ಮಹಾಲಿಂಗಂ (ಬಿಎಸ್‌ಆರ್‌ಸಿ)–2, ಸಾನ್ಯ ಡಿ.ಶೆಟ್ಟಿ (ಮಂಗಳಾ ಈಜು ಕ್ಲಬ್)–3. ಕಾಲ: 2:30.86 ಸೆ.

100 ಮೀ. ಬ್ಯಾಕ್‌ಸ್ಟ್ರೋಕ್‌: ಸುವಾನಾ ಬಿ.ಭಾಸ್ಕರ್ (ಡಾಲ್ಫಿನ್ಸ್)–1, ಭೂಮಿಕಾ ಆರ್‌. (ಬಿಎಸ್‌ಆರ್‌ಸಿ)–2, ಕೆ.ಕ್ಷಿತಿಜಾ (ಬಿಎಸಿ)–3. ಕಾಲ: 1:08.50 ಸೆ. 4X100 ಮೀ. ಫ್ರೀಸ್ಟೈಲ್‌: ಬಿಎಸಿ ‘ಎ’–1, ಬಿಎಸ್‌ಆರ್‌ಸಿ–2, ಬಿಎಸಿ ‘ಬಿ’–3. ಕಾಲ: 4:18.36 ಸೆ.

ಗುಂಪು–2: 800 ಮೀ. ಫ್ರೀಸ್ಟೈಲ್: ದಿವ್ಯಾ ಘೋಷ್‌ (ಬಿಎಸ್‌ಆರ್‌ಸಿ)–1, ಎ.ಜೆದೀದಾ (ಡಾಲ್ಫಿನ್ಸ್‌)–2, ಸಮನ್ವಿತಾ ರವಿಕುಮಾರ್ (ಅಕ್ವಾ ಸ್ವಿಮ್ ಸೆಂಟರ್)–3. ಕಾಲ: 9:59.13 ಸೆ.

100 ಮೀ. ಬ್ರೆಸ್ಟ್ ಸ್ಟ್ರೋಕ್: ರಚನಾ ಎಸ್‌.ಆರ್‌.ರಾವ್ (ಮಂಗಳಾ ಈಜು ಕ್ಲಬ್‌)–1, ಆರುಷಿ ಮಂಜುನಾಥ್‌ (ಡಾಲ್ಫಿನ್ಸ್)–2, ಸಾನ್ವಿ ಎಸ್‌.ರಾವ್‌ (ಬಿಎಸ್‌ಆರ್‌ಸಿ)–3. ಕಾಲ: 1:15.95 ಸೆ. (ಹೊಸ ರಾಷ್ಟ್ರೀಯ ದಾಖಲೆ)

200 ಮೀ. ಬಟರ್‌ಫ್ಲೈ: ಅನ್ವೇಶಾ ಗಿರೀಶ್‌ (ವಿಜಯನಗರ ಅಕ್ವಟಿಕ್)–1, ಎ.ಜೆದೀದಾ (ಡಾಲ್ಫಿನ್ಸ್)–2, ಆದ್ಯಾ ನಾಯಕ್ (ಬಿಎಸಿ)–3. ಕಾಲ: 2:32.93 ಸೆ.

100 ಮೀ. ಬ್ಯಾಕ್‌ಸ್ಟ್ರೋಕ್: ನೀನಾ ವೆಂಕಟೇಶ್‌ (ಡಾಲ್ಫಿನ್ಸ್)–1, ಲತೀಶಾ ಮಂದಣ್ಣ (ವೈಸಿಎಸ್‌ಸಿ)–2, ಪಿ.ವೈಷ್ಣವಿ (ಬಿಎಸಿ)–3. ಕಾಲ: 1:07.32 ಸೆ.

4X100 ಮೀ. ಮೆಡ್ಲೆ: ಡಾಲ್ಫಿನ್ಸ್‌ ಅಕ್ವಟಿಕ್ಸ್–1, ಬಿಎಸಿ ‘ಎ’–2, ಬಿಎಸ್‌ಆರ್‌ಸಿ ‘ಎ’–3. ಕಾಲ: 4:52.44 ಸೆ.

ಗುಂಪು–3: 200 ಮೀ. ಫ್ರೀಸ್ಟೈಲ್‌: ಸೃಷ್ಟಿ ಸತೀಶ್ವರ್‌ (ಬಿಎಸಿ)–1, ವಿ.ಹಿತೈಷಿ (ವಿಜಯನಗರ ಅಕ್ವಟಿಕ್)–2, ಅಂಬರ್‌ ಜೆ.ಸಿಂಗ್ (ಡಾಲ್ಫಿನ್ಸ್)–3. ಕಾಲ: 2:26.76 ಸೆ.

100 ಮೀ. ಬಟರ್‌ಫ್ಲೈ: ರಿಷಿಕಾ ಯು ಮಾಂಗ್ಲೆ (ವಿಜಯನಗರ ಅಕ್ವಟಿಕ್)–1, ರಿಧಿಮಾ ವೀರೇಂದ್ರ ಕುಮಾರ್ (ಬಿಎಸಿ)–2, ಪಿ.ವಿ.ಶೃಂಗಾ (ಬಿಎಸ್‌ಆರ್‌ಸಿ)–3. ಕಾಲ: 1:11.79 ಸೆ.

ಗುಂಪು–4: 100 ಮೀ. ಫ್ರೀಸ್ಟೈಲ್: ವಿಹಿತಾ ನಾರಾಯಣ್‌ (ಪೂಜಾ ಅಕ್ವಟಿಕ್)–1, ಆರ್‌.ಹರ್ಷಿಕಾ (ವಿಜಯನಗರ ಅಕ್ವಟಿಕ್‌)–2, ಪ್ರಿಯಾನ್ಶಿ ಮಿಶ್ರಾ (ವೈಸಿಎಸ್‌ಸಿ)–3. ಕಾಲ: 1:12.58 ಸೆ.

50 ಮೀ. ಬ್ಯಾಕ್‌ಸ್ಟ್ರೋಕ್: ಮಾನವಿ ವರ್ಮಾ (ಡಾಲ್ಫಿನ್ಸ್)–1, ರಿಜುಲ್‌ ಪಾಟೀಲ್‌ (ಸ್ವಿಮ್ಮರ್ಸ್‌ ಕ್ಲಬ್ಬೆಳಗಾವಿ)–2, ವಿಹಿತಾ ನಯನಾ (ಪೂಜಾ ಅಕ್ವಟಿಕ್)–3. ಕಾಲ: 38.81 ಸೆ.

4X50 ಮೀ. ಫ್ರೀಸ್ಟೈಲ್‌: ಬಿಎಸಿ ‘ಎ’–1, ವಿಜಯನಗರ ಅಕ್ವಟಿಕ್‌ ಸೆಂಟರ್‌–2, ಡಾಲ್ಫನ್ಸ್‌ ಅಕ್ವಟಿಕ್‌–3. ಕಾಲ: 2:06.78 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT