ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳಿಂದ ಮಾಸಾಶನ ಬಂದಿಲ್ಲ: ಪೋಸ್ಟ್‌ಮನ್‌ ವಿರುದ್ಧ ಕ್ರಮಕ್ಕೆ ಒತ್ತಾಯ

Last Updated 22 ಜೂನ್ 2019, 12:53 IST
ಅಕ್ಷರ ಗಾತ್ರ

ರಾಯಚೂರು:ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬೆಂಚಮರಡಿ, ಹರವಾಪುರ ಗ್ರಾಮಗಳಲ್ಲಿ ಒಂಭತ್ತು ತಿಂಗಳಿಂದ ಮಾಸಾಶನಗಳನ್ನು ಹಂಚಿಕೆ ಮಾಡದೆ ಹಣ ದುರ್ಬಳಕೆ ಮಾಡಿಕೊಂಡಿರುವ ಪೋಸ್ಟ್‌ಮನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಚಮರಡಿ ಗ್ರಾಮದ ಮುಖ್ಯಸ್ಥ ಖಂಡೋಜಿರಾವ್‌ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೃದ್ಧರಿಗೆ, ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಮಾಸಾಶನಗಳು ಸರ್ಕಾರದಿಂದ ಬಿಡುಗಡೆಯಾದರೂ ಫಲಾನುಭವಿಗಳಿಗೆ ವಿತರಿಸುವ ಕೆಲಸವನ್ನು ಪೋಸ್ಟ್‌ಮನ್‌ ಮಾಡಿಲ್ಲ. 500 ಕ್ಕೂ ಹೆಚ್ಚು ಜನರ ಹಣವನ್ನು ದುರ್ಬಳಕೆ ಮಾಡಲಾಗಿದೆ. ಈ ಬಗ್ಗೆ ಲಿಂಗಸುಗೂರು ಮತ್ತು ರಾಯಚೂರು ಅಂಚೆ ಕಚೇರಿ ಮುಖಸ್ಥರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ ಎಂದರು.

ಅನಕ್ಷರಸ್ಥ ಫಲಾನುಭವಿಗಳಿಂದ ಸಹಿ ಪಡೆದುಕೊಳ್ಳದೆ, ಹೆಬ್ಬೆಟ್ಟು ಒತ್ತಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಹಣವನ್ನು ಬಳಸಿಕೊಂಡಿರುವುದಾಗಿ ಬಹಿರಂಗವಾಗಿಯೇ ಹೇಳುತ್ತಿದ್ದರೂ ಕ್ರಮವಾಗುತ್ತಿಲ್ಲ ಎಂದು ಹೇಳಿದರು.

ಮಾಸಾಶನಕ್ಕಾಗಿ ಕಾದು ಕುಳಿತಿದ್ದ ವಯೋವೃದ್ಧರು ಪೋಸ್ಟ್‌ಮನ್‌ ಮಾಡಿರುವ ಅಕ್ರಮದಿಂದ ಪರಿತಪಿಸುವಂತಾಗಿದೆ. ಕೂಡಲೇ ನ್ಯಾಯ ಒದಗಿಸಬೇಕು ಎಂದು ಕೋರಿದರು.

ಮಾಸಾಶನ ಫಲಾನುಭವಿಗಳಾದ ಬಸಮ್ಮ, ಗಂಗಮ್ಮ, ಜೈನ್‌, ಸಿದ್ದಮ್ಮ, ಆದಮ್ಮ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT