ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಶಿಕ್ಷಕರ ಕ್ಷೇತ್ರ: ಮತದಾನ ಕಾರ್ಯಕ್ಕೆ ಸಿದ್ಧತೆ ಪೂರ್ಣ

ವಿಧಾನ ಪರಿಷತ್‌ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ
Last Updated 27 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ವಿಧಾನ ಪರಿಷತ್‌ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕಾಗಿ ಅಕ್ಟೋಬರ್‌ 28 ರಂದು ನಡೆಯುವ ಮತದಾನ ಕಾರ್ಯಕ್ಕೆ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 17 ಮತಗಟ್ಟೆಗಳಲ್ಲಿ 3,528 ಮತದಾರರು ಮತ ಚಲಾಯಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ನಾಲ್ಕು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತದಾನ ಕೈಗೊಳ್ಳುವ ಬಗ್ಗೆ ಪೂರ್ವ ತರಬೇತಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ರಾಯಚೂರಿನಲ್ಲಿ ಐದು, ಸಿಂಧನೂರಿನಲ್ಲಿ ಒಂದು, ಲಿಂಗಸುಗೂರಿನಲ್ಲಿ ನಾಲ್ಕು, ದೇವದುರ್ಗದಲ್ಲಿ ನಾಲ್ಕು ಹಾಗೂ ಮಾನ್ವಿಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಮತದಾರರು ಮಾತ್ರ ಮತಗಟ್ಟೆಯೊಳಗೆ ಪ್ರವೇಶಿಸಲು ಅವಕಾಶವಿದೆ. ಮತಗಟ್ಟೆಯ ಸುತ್ತಮುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೂ ಮತದಾನ ನಡೆಯಲಿದೆ. ಪ್ರತಿ ಮತಗಟ್ಟೆಯಲ್ಲೂ ಕೋವಿಡ್‌ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗಿದೆ. ಸ್ಯಾನಿಟೈಜೇಷನ್‌ ಪೂರ್ಣಗೊಳಿಸಿದ್ದು, ಮತಗಟ್ಟೆಗೆ ಬರುವ ಪ್ರತಿ ಮತದಾರರು ಮಾಸ್ಕ್‌ ಧರಿಸಬೇಕು. ಸಮರ್ಪಕ ಗುರುತಿನ ಚೀಟಿಯನ್ನು ಆಧರಿಸಿ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮತಗಟ್ಟೆಯಲ್ಲಿ ಸ್ಯಾನಿಟೈಜರ್‌ ನೀಡಲಾಗುತ್ತದೆ. ಕೋವಿಡ್‌–19 ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರನ್ನು ನೋಡಲ್‌ ಅಧಿಕಾರಿ ಎಂದು ನೇಮಕ ಮಾಡಲಾಗಿದೆ.

ಸೂಕ್ಷ್ಮ ಮತಗಟ್ಟೆಗಳು: ಜಿಲ್ಲೆಯಲ್ಲಿ 17 ಮತಗಟ್ಟೆಗಳ ಪೈಕಿ 7 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. 2 ಅತಿಸೂಕ್ಷ್ಮ ಹಾಗೂ 8 ಸಾಮಾನ್ಯ ಮತಗಟ್ಟೆಗಳಾಗಿವೆ. ಪ್ರತಿಯೊಂದು ಮತಗಟ್ಟೆಯಲ್ಲಿ ವಿಡಿಯೋ ಚಿತ್ರೀಕರಣದ ಮೂಲಕ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸಿಂಧನೂರು ತಹಶೀಲ್ದಾರ್‌ ಕಚೇರಿಯಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ 587 ಅತಿಹೆಚ್ಚು ಮತದಾರರು ಮತದಾನ ಮಾಡಲಿದ್ದಾರೆ. 36 ಮತದಾರರು ಇರುವ ಕವಿತಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅತಿಚಿಕ್ಕದು. ದೇವದುರ್ಗ 405, ಲಿಂಗಸುಗೂರು 774, ಮಾನ್ವಿ 326, ಸಿರವಾರ 171, ರಾಯಚೂರು 1,852 ಮತದಾರರಿದ್ದಾರೆ.

ಮತಗಟ್ಟೆಗಳ ವಿವರ: ದೇವದುರ್ಗದ ತಹಶೀಲ್ದಾರ್‌ ಕಚೇರಿ (153 ಮತಗಳು), ಅರಕೇರಾ ಗ್ರಾಮ ಪಂಚಾಯಿತಿ ಮತಗಟ್ಟೆ (105 ಮತಗಳು), ಗಬ್ಬೂರಿನ ಗ್ರಾಮ ಪಂಚಾಯಿತಿ ಕಚೇರಿ (60 ಮತಗಳು), ಜಾಲಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ (87 ಮತಗಳು), ಹಟ್ಟಿ ಕ್ಯಾಂಪ್‌ನ ಜ್ಯುನಿಯರ್‌ ಕಾಲೇಜ ಮತಗಟ್ಟೆ (81 ಮತಗಳು), ಲಿಂಗಸುಗೂರಿನ ತಹಶೀಲ್ದಾರ್‌ ಕಚೇರಿ ಮತಗಟ್ಟೆ (373 ಮತಗಳು), ಮಸ್ಕಿ ಪುರಸಭೆ ಮತಗಟ್ಟೆ (146 ಮತಗಳು), ಮುದಗಲ್‌ ಪುರಸಭೆ ಮತಗಟ್ಟೆ (174 ಮತಗಳು), ಮಾನ್ವಿಯ ಪಟ್ಟಣ ಪಂಚಾಯಿತಿ ಮತಗಟ್ಟೆ (326 ಮತಗಳು), ಸಿರವಾರದ ಸರ್ಕಾರಿ ಪಿಯು ಕಾಲೇಜು ಮತಗಟ್ಟೆ (135ಮತಗಳು), ರಾಯಚೂರಿನ ಎಪಿಎಂಸಿ ಮತಗಟ್ಟೆ (77 ಮತಗಳು), ರಾಯಚೂರಿನ ಶ್ರೀ ಶಾರದಾ ಕನ್ಯಾ ಮಾಧ್ಯಮಿಕ ಪಾಠಶಾಲೆ ಮತಗಟ್ಟೆ (493 (ಮತಗಳು), ರಾಯಚೂರಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಮತಗಟ್ಟೆ (488 ಮತಗಳು), ರಾಯಚೂರು ತಾಲ್ಲೂಕು ಪಂಚಾಯಿತಿ ಕಚೇರಿ ಮತಗಟ್ಟೆ (102 ಮತಗಳು), ರಾಯಚೂರಿನ ಯರಮರಸ್‌ ಕ್ಯಾಂಪ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ (105 ಮತಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT