ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್‌ ವಿತರಣೆ

Last Updated 20 ಆಗಸ್ಟ್ 2019, 12:31 IST
ಅಕ್ಷರ ಗಾತ್ರ

ರಾಯಚೂರು: ನಗರದ ಕೆಇಬಿ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೇಡಿಶೆಟ್ಟಿ ಗೋವಿಂದಯ್ಯ ಭೀಮಕ್ಕ ಅವರ ಸ್ಮರಣಾರ್ಥ ಹಾಗೂ ಶಿಕ್ಷಣ ಕಿರಣ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಒಟ್ಟು ಎರಡು ಸಾವಿರ ನೋಟ್‌ಬುಕ್‌ಗಳನ್ನು ಉಚಿತವಾಗಿ ಸೋಮವಾರ ವಿತರಿಸಲಾಯಿತು.

ಈ ಸಂಬಂಧ ಏರ್ಪಡಿಸಿದ್ದ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ ಮಾತನಾಡಿ, ಗುಣಮಟ್ಟದ ಶಿಕ್ಷಣ ದೊರಕಿಸಲು ಸಮಾಜದ ಪ್ರೋತ್ಸಾಹವೂ ಆಗತ್ಯ. ಈ ನಿಟ್ಟಿನಲ್ಲಿ ಶೆಟ್ಟಿ ಅವರ ಕುಟುಂಬದ ಕಾರ್ಯ ಶ್ಲಾಘನೀಯ ಎಂದರು.

ಗೋಪಾಲಯ್ಯ ಶೆಟ್ಟಿ ಮಾತನಾಡಿ, ಅನೇಕ ವರ್ಷಗಳಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ನಗರಸಭೆ ಸದಸ್ಯ ಶರಣಬಸಪ್ಪ ಬಲ್ಲಟಗಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಜಯಣ್ಣ, ಶಿಕ್ಷಣ ಕಿರಣ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಗವಾಯಿ, ಪದಾಧಿಕಾರಿಗಳಾದ ಕೃಷ್ಣಪ್ಪ ಮಲ್ಲಯ್ಯ ನಾಗೋಲಿ, ಹನಮಂತು ಬಿ, ಸೈಯದ್ ಹಫೀಜುಲ್ಲಾ ಹಾಗೂ ಶಾಲೆಯ ಮುಖ್ಯಗುರು ಚಂದ್ರಕಾಂತಹವಾಲ್ದಾರ್, ಡಯಟ್‌ ಉಪನ್ಯಾಸಕ ಚಂದ್ರಶೇಖರ ಭಂಡಾರಿ ಇದ್ದರು.

ಸರ್ಕಾರಿ ಪ್ರಾಥಮಿಕ ಶಾಲೆ ಹಾಷ್ಮಿಯಾ ಕನ್ನಡ ಮತ್ತು ಉರ್ದು ಶಾಲೆ ಹಾಗೂ ಮೌಲಾನಾ ಆಜಾದ್ ಪ್ರೌಢಶಾಲೆಯ ಮಕ್ಕಳಿಗೂ ಸಹ ನೋಟ್‌ಬುಕ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT