ಸಿಂಧನೂರು: ‘ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮರಾವ್ ಅವರ ಜನಪರ ಮತ್ತು ಅಭಿವೃದ್ಧಿಪರ ಆಡಳಿತ ದೇಶಕ್ಕೆ ಮಾದರಿಯಾಗಿದೆ’ ಎಂದು ಕಾಕತೀಯ ಕ್ಲಬ್ ಅಧ್ಯಕ್ಷ ತಾಳೂರಿ ಸುಬ್ಬಾರಾವ್ ಅಭಿಪ್ರಾಯಪಟ್ಟರು.
ನಗರದ ಕಾಕತೀಯ ಕ್ಲಬ್‍ನಲ್ಲಿ ಎನ್‍ಟಿಆರ್ ಅಭಿಮಾನಿಗಳ ಬಳಗ ಹಾಗೂ ಕಮ್ಮವಾರಿ ಸಂಘದ ಯುವ ಪಡೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
‘ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮರಾವ್ ಅವರ ಶತ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂರು ರೂಪಾಯಿ ನಾಣ್ಯದಲ್ಲಿ ಆಂಧ್ರಪ್ರದೇಶದ ನಂದಮೂರಿ ತಾರಕ ರಾಮರಾವ್ ಅವರ ಭಾವಚಿತ್ರದ ಸ್ಮಾರಕ ಬಿಡುಗಡೆ ಮಾಡಿರುವುದು ಸ್ವಾಗತಾರ್ಹವಾಗಿದೆ’ ಎಂದು ಹೇಳಿದರು.
ಮುಖಂಡರಾದ ಬಲುಸು ಸುಬ್ರಮಣ್ಯ, ವಿಶ್ವನಾಥ ಚೌದರಿ, ಸುರೇಶ ನೆಕ್ಕಂಟಿ, ಅಶೋಕ ನಲ್ಲ, ಯುವ ಮುಖಂಡರಾದ ಹರೀಶ, ಬಾಲಕೃಷ್ಣ, ಭಾಸ್ಕರ, ಶಿವಪ್ರಸಾದ ನೆಕ್ಕಂಟಿ, ಕಾರುಣ್ಯ ಆಶ್ರಮದ ಆಡಳಿತಾಧಿಕಾರಿ ಡಾ.ಚನ್ನಬಸವಸ್ವಾಮಿ ಹಿರೇಮಠ ಹಾಗೂ ಎನ್‍ಟಿಆರ್ ಅಭಿಮಾನಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.