ರಾಸಾಯನಿಕ ಉತ್ಪಾದನೆ ಸ್ಥಗಿತಕ್ಕೆ ವಿಫಲ: ದೂರು

7

ರಾಸಾಯನಿಕ ಉತ್ಪಾದನೆ ಸ್ಥಗಿತಕ್ಕೆ ವಿಫಲ: ದೂರು

Published:
Updated:
Prajavani

ರಾಯಚೂರು: ತಾಲ್ಲೂಕಿನ ದೇವಸುಗೂರು ಕೈಗಾರಿಕಾ ವಲಯದಲ್ಲಿರುವ ಮೆ. ಶಿಲ್ಪಾ ಮೆಡಿಕೇರ್‌ ಲಿಮಿಟೆಡ್‌ ಯುನಿಟ್‌–1 ಉತ್ಪಾದನೆ ತಕ್ಷಣ ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಿಲ್ಲಾಧಿಕಾರಿಗೆ ಸೂಚಿಸಿ ನಾಲ್ಕು ತಿಂಗಳಾದರೂ ಕ್ರಮವಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲು ವಿಫಲರಾಗಿದ್ದು, ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬುಧವಾರ ದೂರು ಸಲ್ಲಿಸಿದ್ದಾರೆ.

ಜೀವಕ್ಕೆ ಮಾರಕವಾಗಿರುವ ರಾಸಾಯನಿಕ ವಸ್ತುಗಳ ಉತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿಯೆ ಸ್ಥಗಿತಗೊಳಿಸಲಾಗುತ್ತಿದೆ. ದೇವಸುಗೂರಿನ ಸುತ್ತಮುತ್ತ ಲಕ್ಷಾಂತರ ಜನರು ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುತ್ತಿರುವ ಶಿಲ್ಪಾ ಮೆಡಿಕೇರ್‌ ಯುನಿಟ್‌ ಏಕೆ ಸ್ಥಗಿತಗೊಳಿಸುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ದೆಹಲಿ ಕಚೇರಿಯು ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಕ್ರಮವಾಗಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಮೆಡಿಕೇರ್‌ ಪಡೆದಿದ್ದ ಸಿಓಎಫ್‌ 2016 ರ ಜೂನ್‌ನಲ್ಲಿಯೆ ಮುಕ್ತಾಯವಾಗಿದೆ. ಯಾವುದೇ ಅಧಿಕಾರಿ ಜನರ ಆರೋಗ್ಯದ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !