ಚಿನ್ನದ ಗಣಿ ಕುಸಿತ: ಕಾರ್ಮಿಕ ಸಾವು

7

ಚಿನ್ನದ ಗಣಿ ಕುಸಿತ: ಕಾರ್ಮಿಕ ಸಾವು

Published:
Updated:
Prajavani

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಮಲ್ಲಪ್ಪ ಶಾಫ್ಟ್ 15ನೇ ಹಂತ 1500 ಅಡಿ ಆಳದಲ್ಲಿ ಗಣಿ ಕುಸಿತವಾಗಿ ಒಬ್ಬರು ಕಾರ್ಮಿಕ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಭಾನುವಾರ ಬೆಳಗಿನ ಪಾಳಿ ಕೆಲಸದ ವೇಳೆ ನಡೆದಿದೆ.

ಲಿಂಗಸುಗೂರು ತಾಲ್ಲೂಕಿನ ಆನ್ವರಿ ಗ್ರಾಮದ ದಾವಲಸಾಬ್‌ ಎಂ.ಡಿ. ಹುಸೇನ್‌ (44) ಮೃತಪಟ್ಟಿದ್ದಾರೆ. ಗಣಿಯ ಕಲ್ಲುಗಳು ಬಿದ್ದು ಎದೆ, ಕೈ ಹಾಗೂ ಕಾಲುಗಳ ಒಳಭಾಗದಲ್ಲಿ ಪೆಟ್ಟುಗಳಾಗಿ ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಕಂಪೆನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕೂಡಲೇ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ ಕಾರ್ಮಿಕರು ‘ಗಣಿಯಲ್ಲಿ ಸುರಕ್ಷತೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆ ಸರಿಪಡಿಸಬೇಕು ಹಾಗೂ ಕಾರ್ಮಿಕನ ಕುಟುಂಬಕ್ಕೆ ತಕ್ಷಣ ಉದ್ಯೋಗ ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

ಸ್ಥಳಕ್ಕೆ ಧಾವಿಸಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಂಗೂರ ಮಠ ಅವರು, ಮೃತ ಕಾರ್ಮಿಕನ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಮತ್ತು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !