ಸೋಮವಾರ, ಆಗಸ್ಟ್ 26, 2019
27 °C
ಅನಾರೋಗ್ಯಪೀಡಿತ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೃಷ್ಣಾ ನದಿ ಪ್ರವಾಹ ಯಥಾಸ್ಥಿತಿ

Published:
Updated:

ರಾಯಚೂರು/ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಸಂಪರ್ಕ ಕಡಿದುಕೊಂಡಿರುವ ಯಳಗುಂದಿ ನಡುಗಡ್ಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮೂವರು ಮಕ್ಕಳನ್ನು ಬೋಟ್‌ಗಳಲ್ಲಿ  ಕರೆತಂದು ರಾಯಚೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

ಎನ್‌ಡಿಆರ್‌ಎಫ್‌ ತಂಡದವರು ಈ ಮಕ್ಕಳು ಹಾಗೂ ಅವರ ಪಾಲಕರನ್ನು ಬೋಟ್‌ಗಳಲ್ಲಿ ಕರೆತಂದರು.

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 5.86 ಲಕ್ಷ ಕ್ಯುಸೆಕ್‌ ನೀರು ಬಿಡುತ್ತಿದ್ದು, ಯಾದಗಿರಿ, ರಾಯಚೂರು ಜಿಲ್ಲೆಗಳ ಈ ನದಿ ತೀರದಲ್ಲಿ ಪ್ರವಾಹ ಸ್ಥಿತಿ ಇನ್ನೂ ಯಥಾಸ್ಥಿತಿಯಲ್ಲಿದೆ.

ಕಲಬುರ್ಗಿಯಲ್ಲಿ ಬುಧವಾರ ರಾತ್ರಿ ಉತ್ತಮ ಮಳೆ ಸುರಿಯಿತು.

Post Comments (+)