ಸೋಮವಾರ, ಸೆಪ್ಟೆಂಬರ್ 27, 2021
23 °C
ಸೇಂಟ್ ಮೇರಿ ಬಾಲಕ, ಬಾಲಕಿಯರ ಕಾನ್ವೆಂಟ್ ಶಾಲೆ

ಶಾಲಾ ಪ್ರವೇಶ ಅರ್ಜಿಗಾಗಿ ನಡುರಾತ್ರಿಯಿಂದ ಪಾಲಕರ ಸರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿರುವ ಸೇಂಟ್ ಮೇರಿ ಬಾಲಕ, ಬಾಲಕಿಯರ ಕಾನ್ವೆಂಟ್ ಶಾಲೆಯಲ್ಲಿ ಪ್ರವೇಶ ಅರ್ಜಿ ಪಡೆಯಲು ಪಾಲಕರು ಭಾನುವಾರ ನಡುರಾತ್ರಿಯಿಂದ ಸರದಿ ನಿಂತಿದ್ದಾರೆ.

ಜೂನ್ 28 ಮತ್ತು 29 ರಂದು ಬೆಳಿಗ್ಗೆ 8 ರಿಂದ 11 ಗಂಟೆವರೆಗೂ ಪ್ರವೇಶ ಅರ್ಜಿ ವಿತರಿಸಲಾಗುವುದು ಎಂದು ಶಾಲೆಯ ಗೋಡೆಗೆ ಬ್ಯಾನರ್ ಅಂಟಿಸಲಾಗಿದೆ. ಎಲ್ ಕೆಜಿ, ಯುಕೆಜಿ, 1, 2 ಹಾಗೂ 3 ನೇ ತರಗತಿಗಳಿಗೆ ಮಾತ್ರ ಅರ್ಜಿಗಳನ್ನು ವಿತರಿಸಲಾಗುತ್ತಿದೆ.

'ರಾತ್ರಿ 3.30 ಯಿಂದಲೇ ಸರದಿಯಲ್ಲಿ ನಿಂತಿದ್ದೇವೆ. ಒಳ್ಳೆಯ ಶಾಲೆ, ಉತ್ತಮವಾಗಿ ಪಾಠ ಮಾಡುತ್ತಾರೆ ಎನ್ನುವ ಕಾರಣಕ್ಕೆ‌ ಪ್ರವೇಶ ಪಡೆಯಲು ಸ್ಪರ್ಧೆ ಇದೆ' ಎಂದು ಪಾಲಕರೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು