ಸಂಭ್ರಮದ ನಾಗರ ಪಂಚಮಿ ಆಚರಣೆ

7

ಸಂಭ್ರಮದ ನಾಗರ ಪಂಚಮಿ ಆಚರಣೆ

Published:
Updated:
Deccan Herald

ರಾಯಚೂರು: ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ನಾಗರ ಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಸ್ವಾತಂತ್ರ್ಯೋತ್ಸವ ದಿನದಂದು ಹಬ್ಬ ಬಂದಿದ್ದರಿಂದ ಮಕ್ಕಳು ಸೇರಿದಂತೆ ಯುವಕ, ಯುವತಿಯರು ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂಭ್ರಮದಲ್ಲಿದ್ದರು. ಆದರೆ, ಮನೆಯ ಮಹಿಳೆಯರು ಮಾತ್ರ ನಾಗರ ಪಂಚಮಿಯನ್ನು ಸಂಪ್ರದಾಯದಂತೆ ಆಚರಿಸುವುದಕ್ಕೆ ದೇವಸ್ಥಾನದತ್ತ ಧಾವಿಸುತ್ತಿರುವುದು ಬುಧವಾರ ಬೆಳಿಗ್ಗೆ ಕಂಡು ಬಂತು.

ರಾಯಚೂರು ನಗರದ ಏಗನೂರ ಟೆಂಪಲ್‌, ಪಂಚಮುಖಿ ಕಾಲೋನಿ, ಡ್ಯಾಡಿ ಕಾಲೋನಿ, ಜವಾಹರ ನಗರ, ಮಡ್ಡಿಪೇಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮಹಿಳೆಯರು ದೇವಸ್ಥಾನಗಳ ಎದುರಿನ ನಾಗ ಪ್ರತಿಮೆಗಳಿಗೆ ಹಾಲು ಅಭಿಷೇಕ ಮಾಡಿ, ಅರಿಷಿಣ ದಾರ ಕಟ್ಟಿ ಭಕ್ತಿಯಿಂದ ಪೂಜಿಸುತ್ತಿರುವುದು ವಿಶೇಷವಾಗಿತ್ತು.

ಕೆಲವು ಕಡೆ ಜನರು ಹುತ್ತಕ್ಕೆ ಹಾಲೆರೆದು ಭಕ್ತಿಯಿಂದ ನಮಿಸಿದರು. ಹಬ್ಬಕ್ಕಾಗಿ ಮಾಡಿರುವ ಅಳ್ಳು, ಉಂಡೆ ಹಾಗೂ ವಿವಿಧ ಸಿಹಿ ಪದಾರ್ಥಗಳನ್ನು ನಾಗ ದೇವತೆಗೆ ನೈವೇದ್ಯ ಮಾಡಿ ಜನರು ಪುಣಿತರಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !