ಮಂಗಳವಾರ, ಮೇ 17, 2022
25 °C

ನೇರ ಫೋನ್ ಇನ್ ಕಾರ್ಯಕ್ರಮ ಮೇ 2 ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರಾಯಚೂರು ಆಕಾಶವಾಣಿ ಕೇಂದ್ರವು ಮೇ 2 ರಂದು ಸಂಜೆ 6 ಗಂಟೆ 50 ನಿಮಿಷದಿಂದ 7 ಗಂಟೆ 35 ನಿಮಿಷದವರೆಗೆ ಜಿಲ್ಲೆಯಲ್ಲಿ ಬಿ.ಟಿ.ಹತ್ತಿಯಲ್ಲಿ ಗುಲಾಬಿ ಕಾಯಿ ಕೊರೆಕದ ನಿರ್ವಹಣೆಗೆ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ನೇರ ಫೋನ್-ಇನ್ ಕಾರ್ಯಕ್ರಮ ಪ್ರಸಾರ ಮಾಡಲಿದೆ.

ರಾಯಚೂರು ಕೃಷಿ ಮಹಾವಿದ್ಯಾಲಯದ ಕೀಟ ತಜ್ಞ ಡಾ. ಎ.ಜಿ. ಶ್ರೀನಿವಾಸ ಹಾಗೂ ಕುರ್ಡಿ ಗ್ರಾಮದ ಪ್ರಗತಿಪರ ರೈತ ವೆಂಕಟೇಶ ರೆಡ್ಡಿ ಅವರು ಭಾಗವಹಿಸಿ ಗುಲಾಬಿ ಕಾಯಿ ಕೊರೆಕದ ನಿರ್ವಹಣೆಗೆ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ  ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುವರು.

ಕೇಳುಗರು  ಹಾಗೂ ರೈತ ಬಾಂಧವರು ಆಕಾಶವಾಣಿ ದೂರವಾಣಿ ಸಂಖ್ಯೆ 08532– 223178 ಅಥವಾ 223365 ಇವುಗಳಿಗೆ ಕರೆಮಾಡಿ ಜಿಲ್ಲೆಯಲ್ಲಿ ಬಿ.ಟಿ.ಹತ್ತಿಯಲ್ಲಿ ಗುಲಾಬಿ ಕಾಯಿ ಕೊರೆಕದ ನಿರ್ವಹಣೆಗೆ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಜಿಲ್ಲೆಯ ಕೇಳುಗರು ಹಾಗೂ ರೈತ ಬಾಂಧವರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ರಾಯಚೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮದ ಮುಖ್ಯಸ್ಥ ಡಾ. ವಿ.ಜಿ. ಬಾವಲತ್ತಿ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.