ಕಾಲುವೆ ಮೇಲ್ಭಾಗದ ಅಕ್ರಮಗಳ ತಡೆಗೆ ಕಾನೂನು: ಸಚಿವ

7

ಕಾಲುವೆ ಮೇಲ್ಭಾಗದ ಅಕ್ರಮಗಳ ತಡೆಗೆ ಕಾನೂನು: ಸಚಿವ

Published:
Updated:
Deccan Herald

ರಾಯಚೂರು: ಕಾಲುವೆಗಳ ಕೊನೆಯ ಭಾಗ (ಟೇಲ್‌ ಎಂಡ್‌)ಕ್ಕೆ ನೀರು ತಲುಪಿಸುವ ಸಂಬಂಧ ಕಾಲುವೆ ಮೇಲ್ಭಾಗದ ಅಕ್ರಮಗಳನ್ನು ತಡೆಯುವುದಕ್ಕೆ ಸೂಕ್ತ ಕಾನೂನು ರೂಪಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಹೇಳಿದರು.

ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆಹಾನಿಯಾದ ಜಮೀನುಗಳಿಗೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಬಹುತೇಕ ಕಾಲುವೆಗಳ ಕೊನೆಯ ಭಾಗದ ರೈತರು ಸಂಕಷ್ಟ ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವುದರಿಂದ ಈ ಬಗ್ಗೆ ಕಳೆದ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ. ಅಕ್ರಮಗಳಿಗೆ ಆದಷ್ಟು ಶೀಘ್ರ ಕಡಿವಾಣ ಹಾಕುವ ಕೆಲಸ ಮಾಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !