ರಾಯಚೂರು: ದಸರಾ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಗಜಲ್ ಖ್ಯಾತಿಯ ಕವಿ ಮಹಾದೇವ ಅವರಿಗೆ ಗಾಣಿಗ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಗಾಣಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಪ್ಪ ಸಜ್ಜನ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಬಸಪ್ಪ ಹಳ್ಳಿ ಗೊರೆಬಾಳ್ ಮಾತನಾಡಿ, ‘ಗಾಣಿಗ ಸಮಾಜದ ಮಹಾದೇವ ಪಾಟೀಲ ಪ್ರತಿಭಾ ಪ್ರದರ್ಶನದ ಮೂಲಕ ಸಮಾಜದ ಗೌರವ ಹೆಚ್ಚಿಸಿದ್ದಾರೆ’ ಎಂದರು.
ವಿಜಯಕುಮಾರ ಸಜ್ಜನ್, ಉಮಾಶಂಕರ ವಕೀಲರು, ನರೇಶ್ ಹೊಕ್ರಾಣಿ, ಶಂಕ್ರಪ್ಪ ಸಜ್ಜನ, ಪ್ರಭಾಕರ ಸಜ್ಜನ, ಬಸವರಾಜಪ್ಪ ಮಂಚಲಾಪೂರ ಸೇರಿದಂತೆ ಸಮಾಜದ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.