ಮಂಗಳವಾರ, ಮೇ 26, 2020
27 °C

ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕು ಆರ್‌ಎಚ್‌ ಕ್ಯಾಂಪ್‌–2 ರಲ್ಲಿ ಇಬ್ಬರು ಶಾಲಾ ಬಾಲಕಿಯರ ಮೇಲೆ ಏಕಕಾಲಕ್ಕೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಯಾಂಪ್‌ನಲ್ಲಿ ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದ ಆರೋಪಿ ಅರುಣರಾಯ್‌ ಠಾಕೂರ್‌, ಅತ್ಯಾಚಾರ ಘಟನೆಯು ಬಾಲಕಿಯರ ಮನೆಯವರಿಗೆ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಸಾಧುವೇಷ ಧರಿಸಿ ಸಂಚರಿಸುತ್ತಿದ್ದ. ನೊಂದ ಬಾಲಕಿಯ ತಾಯಿಯು ಮಾರ್ಚ್ 7 ರಂದು ಈ ಬಗ್ಗೆ ಸಿಂಧನೂರು ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದರು. 

ಅಂಗಡಿ ಎದುರು ಹಾಯ್ದುಹೋಗುತ್ತಿದ್ದ ಇಬ್ಬರು ಬಾಲಕಿಯರಿಗೆ ಚಾಕೋಲೆಟ್‌ ಹಾಗೂ ಇತರೆ ತಿಂಡಿ, ತಿನಿಸು ಕೊಟ್ಟು ಒಳಗಡೆ ಕರೆದೊಯ್ದು, ಇಬ್ಬರ ಬಾಯಲ್ಲಿ ಬಟ್ಟೆ ತುಂಬಿ ಅತ್ಯಾಚಾರ ನಡೆಸಿದ್ದ. ಆನಂತರ ಕೈತುಂಬ ಸ್ಟೇಷನರಿ ವಸ್ತುಗಳನ್ನು ಕೊಟ್ಟು ವಿಷಯ ಬಾಯಿ ಬಿಡದಂತೆ ಎಚ್ಚರಿಕೆ ನೀಡಿದ್ದ. ಫೆಬ್ರುವರಿ 25 ರಂದು ಘಟನೆ ನಡೆದಿದ್ದನ್ನು ಎರಡು ವಾರ ತಡವಾಗಿ ಬಾಲಕಿಯರು ಮನೆಯವರಿಗೆ ಹೇಳಿದ್ದಾರೆ. ಇದರ ಸುಳಿವು ಸಿಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು