ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನವಶ್ಯಕ ಓಡಾಟ: ಲಾಠಿ ಏಟು, ದಂಡ

Last Updated 30 ಏಪ್ರಿಲ್ 2021, 13:21 IST
ಅಕ್ಷರ ಗಾತ್ರ

ಸಿಂಧನೂರು: ಅನವಶ್ಯಕವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಮತ್ತು ಕಾರುಗಳಲ್ಲಿ ತಿರುಗಾಡುವವರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿ ದಂಡ ವಿಧಿಸುತ್ತಿದ್ದಾರೆ.

ಬೆಳಿಗ್ಗೆ 10 ಗಂಟೆ ನಂತರವೂ ಅನೇಕರು ವಿನಾಃಕಾರಣ ಬೈಕ್, ಕಾರು ಮತ್ತಿತರ ವಾಹನಗಳಲ್ಲಿ ಓಡಾಡುತ್ತಾರೆ.

ಬೆಳಿಗ್ಗೆ 10 ಗಂಟೆಯ ನಂತರ ನಗರದ ಮಹಾತ್ಮಗಾಂಧಿ ವೃತ್ತ, ಶಹರ ಪೊಲೀಸ್ ಠಾಣೆ ಮುಂಭಾಗ, ಕನಕದಾಸ ವೃತ್ತ, ಅಂಚೆ ಕಚೇರಿ ಮುಂಭಾಗ, ಗಂಗಾವತಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಮುಂಭಾಗ, ಕುಷ್ಟಗಿ ರಸ್ತೆಯಲ್ಲಿರುವ ಎಚ್‍ಡಿಎಫ್‍ಸಿ ಬ್ಯಾಂಕ್ ಮುಂಭಾಗ ಮತ್ತು ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆ ಮುಂಭಾಗದಲ್ಲಿ ಶಹರ ಪೊಲೀಸ್ ಠಾಣೆಯ ಸಬ್‍ ಇನ್‌ಸ್ಪೆಕ್ಟರ್‌ ವಿಜಯಕೃಷ್ಣ, ಸಂಚಾರ ಪೊಲೀಸ್ ಠಾಣೆ ಸಬ್‍ ಇನ್‌ಸ್ಪೆಕ್ಟರ್‌ ಹುಲ್ಲಪ್ಪ ರಾಠೋಡ್ ನೇತೃತ್ವದಲ್ಲಿ ಕಾನ್‍ಸ್ಟೆಬಲ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೈಕ್ ಸೇರಿದಂತೆ ವಾಹನಗಳಲ್ಲಿ ತಿರುಗಾಡುವವರನ್ನು ‘ಯಾವ ಕಾರಣಕ್ಕೆ ಹೊರಗಡೆ ಬಂದಿದ್ದೀರಿ’ ಎಂದು ವಿಚಾರಿಸುತ್ತಿದ್ದಾರೆ.

ಆಸ್ಪತ್ರೆ, ಬ್ಯಾಂಕ್, ಸರ್ಕಾರಿ ಕಚೇರಿಗೆ ಬಂದವರನ್ನು ಹೊರತುಪಡಿಸಿ, ಅನವಶ್ಯಕವಾಗಿ ತಿರುಗಾಡುವವರಿಗೆ ಲಾಠಿ ಏಟು ನೀಡಿ, ವಾಹನದ ಕೀಲಿ ಕಸಿದುಕೊಂಡು ದಂಡ ಹಾಕಿ, ‘ಇನ್ನೊಮ್ಮೆ ಸುಮ್ಮನೆ ತಿರುಗಾಡಿದರೆ ಗಾಡಿ ಜಪ್ತಿ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ಮಾತು ಹೇಳಿ ಕಳುಹಿಸುತ್ತಿದ್ದಾರೆ.

ತಾಲ್ಲೂಕಿನ ಹಳ್ಳಿ ಮತ್ತು ಕ್ಯಾಂಪ್‍ಗಳಲ್ಲೂ ಗ್ರಾಮೀಣ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ನೇತೃತ್ವದಲ್ಲಿ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆಯವರೆಗೂ ಗಸ್ತು ತಿರುಗಿ ಮಾಸ್ಕ್ ಧರಿಸದವರಿಗೆ, ಅನವಶ್ಯಕವಾಗಿ ತಿರುಗಾಡುವವರಿಗೆ ದಂಡ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT