ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್‌ ಕ್ಯಾಮರಾ ನಿಗಾ

Last Updated 30 ಮಾರ್ಚ್ 2020, 14:42 IST
ಅಕ್ಷರ ಗಾತ್ರ

ರಾಯಚೂರು:ನಗರದ ಸಿಯಾತಲಾಬ್, ಜಲಾಲ್ ನಗರ, ಕಾಳಿದಾಸ ನಗರ, ಎಲ್‌ಬಿಎಸ್‌ ನಗರ ಹಾಗೂ ಹರಿಜನವಾಡ ಜನಜಂಗುಳಿ ಇರುವ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಮೂಲಕ ವಿಡಿಯೋ ಮಾಡಿ ಮೇಲಿಂದಮೇಲೆ ಹೋರ ಬರುವವರ ಮೇಲೆ ಲಘು ಪ್ರಕರಣ ದಾಖಲೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ನಗರದ ಜನತೆ ನಮ್ಮ ಕರ್ತವ್ಯಕ್ಕೆ ಸಹಕರಿಸುವ ಮೂಲಕ ಕೊರೊನಾ ಸೋಂಕು ತಡೆಗಟ್ಟುವ ಕಾರ್ಯ ಯಶಸ್ವಿಯಾಗೊಳಿಸಬೇಕು. ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಈಗಾಗಲೇ ದೇಶದಾದ್ಯಂತ ಬಂದ್ ಜಾರಿಯಲ್ಲಿದ್ದರೂ ಸಾರ್ವಜನಿಕರು ವಿನಾಕಾರಣ ರಸ್ತೆಯ ಮೇಲೆ ಸುತ್ತಾಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಡ್ರೋನ್ ಕ್ಯಾಮರಾ ಮೂಲಕ ತಿರುಗಾಡುವವರ ಮೇಲೆ ನಿಗಾವಹಿಸಲು ವಿಡಿಯೋ ಮಾಡುವ ಮೂಲಕ ಅನಗತ್ಯವಾಗಿ ಬರದಂತೆ ನಿರ್ಭಂದ ತರಲು ಈ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕರು ಹೊ ಬರದೆ ತಮ್ಮ ಮನೆಯಲ್ಲಿಯೇ ಇದ್ದು ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT